ಬಹಾಉಲ್ಲಾರವರ 200ನೇ ಜಯಂತಿ ಉತ್ಸವ

ಶನಿವಾರ, ಮೇ 25, 2019
25 °C

ಬಹಾಉಲ್ಲಾರವರ 200ನೇ ಜಯಂತಿ ಉತ್ಸವ

Published:
Updated:

ಮಂಗಳೂರು: ಬಹಾಯಿ ಧರ್ಮದ ಸಂಸ್ಥಾಪಕ ಬಹಾಉಲ್ಲಾ(ಭರ್ಗೋ ದೇವಸ್ಯ)ಅವರ ಇನ್ನೂರನೇ ವರ್ಷದ ಜನ್ಮ ಜಯಂತಿಯ ದ್ವಿಶತಮಾನೋತ್ಸವದ ಸಂಭ್ರಮದ ಆಚರಣೆಯನ್ನು ಮಂಗಳೂರಿನ ಸ್ಥಳೀಯ ಬಹಾಯಿ ಆಧ್ಯಾತ್ಮಿಕ ಸಭೆಯು ಇತ್ತೀಚೆಗೆ ಎಸ್.ಡಿ.ಎಮ್. ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಉತ್ಸವದ ಅಂಗವಾಗಿ ನಡೆದ ವಿಶ್ವಶಾಂತಿ ಹಾಗೂ ಭ್ರಾತೃತ್ವದ ಶೃಂಗ ಸಭೆ ಉದ್ಘಾಟನೆ ಮಾಡಿದ ಡೈಜಿವರ್ಲ್ಡ್ ಮೀಡಿಯಾ ಸಮೂಹದ ಮುಖ್ಯ ಸಂಪಾದಕರಾದ ವಾಲ್ಟರ್ ನಂದಳಿಕೆಯವರು “ದೇವರ ಏಕತ್ವ,ಧರ್ಮಗಳ ಐಕ್ಯತೆ ಹಾಗು ಮಾನವ ಜನಾಂಗದ ಐಕ್ಯತೆಯ” ಸುಂದರ ಸಂದೇಶವನ್ನು ಸಾರುವ ಬಹಾಯಿ ಧರ್ಮ ಎಂದರು.

ದುಬಾಯಿಯ ಬಿ.ಎಮ್.ಎಸ್ ಯೋಗಕೇಂದ್ರದ ಅಧ್ಯಕ್ಷ ಲೋಕೇಶ್ ಪುತ್ರನ್, ಜಸ್ಪಾಲ್ ಸಿಂಗ್(ಸಿಖ್ ಧರ್ಮ), ಮುನಿರಾಜ್ ರೆಂಜಾಳ(ಜೈನ ಧರ್ಮ), ಆಶುಬೆದ್ರ (ಇಸ್ಲಾಂ ಧರ್ಮ), ರೋಷಲ್ ಡ್ಯಾಸ (ಕ್ರೈಸ್ತ ಧರ್ಮ) ಹಾಗು ಡಾ. ಸಿ.ಎಸ್.ಮಾಲ (ಬಹಾಯಿ ಧರ್ಮ)ದ ಮಾತನಾಡಿದರು.

ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಸ್ತಿ ಗಣೇಶ್ ಶೆಣೈ ಅತಿಥಿಗಳನ್ನು ಸ್ವಾಗತಿಸಿದರು. ವಿಜಯ್ ಅನಂತ್ ವಂದನಾರ್ಪಣೆ ಮಾಡಿದರು. ಯಶಸ್ವಿನಿ ನಿರೂಪಿಸಿದರು. ಡಾ. ದೇವರಾಜ್.ಕೆ. ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry