‘ಕೊಲೂರು ಮಲ್ಲಪ್ಪ ಯುವಕರಿಗೆ ಮಾದರಿ’

ಮಂಗಳವಾರ, ಜೂನ್ 25, 2019
29 °C

‘ಕೊಲೂರು ಮಲ್ಲಪ್ಪ ಯುವಕರಿಗೆ ಮಾದರಿ’

Published:
Updated:

ಯಾದಗಿರಿ: ‘ಆದರ್ಶ ಜೀವನ ನಡೆಸುವ ಮೂಲಕ ಕೊಲ್ಲೂರ ಮಲ್ಲಪ್ಪನವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ’ ಎಂದು ಕೊಲೂರು ಮಲ್ಲಪ್ಪ ಮೆಮೋರಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಶೈಲ ಪೂಜಾರಿ ಹೇಳಿದರು.

ನಗರದಲ್ಲಿ ಮಂಗಳವಾರ ಕೊಲೂರು ಮಲ್ಲಪ್ಪ ಮೆಮೋರಿಯಲ್  ಶಿಕ್ಷಣ ಸಂಸ್ಥೆ ವತಿಯಿಂದ ಕೊಲೂರು ಮಲ್ಲಪ್ಪ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಹೈದರಾಬಾದ್ ಕರ್ನಾಟಕದ ಗಾಂಧಿ ಎಂದೇ ಚಿರಪರಿಚಿತರಾಗಿದ್ದ ಮಲ್ಲಪ್ಪನವರು ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಒಲಿದು ಬಂದರೂ, ಅದನ್ನು ನಯವಾಗಿ ನಿರಾಕರಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಸ್ವಚಾರಿತ್ರ್ಯವನ್ನು ಇಂದಿನ ಯುವಕರು ಅನುಸರಿಸಬೇಕು’ ಎಂದು ಕರೆ ನೀಡಿದರು.

ನಗರಸಭೆ ಸದಸ್ಯ ಶಶಿಧರರೆಡ್ಡಿ ಹೊಸಳ್ಳಿ ಮಾತನಾಡಿ, ‘ಮಲ್ಲಪ್ಪನವರು ಕುಷ್ಠರೋಗಿಗಳಿಗಾಗಿ ಮಾಡಿದ ಸೇವೆ, ಹೈದರಾಬಾದ್‌ ಕರ್ನಾಟಕ ವಿಮೋಚನೆಗೆ ಅವರ ಹೋರಾಟದ ಕೊಡುಗೆ ಅಪಾರವಾಗಿತ್ತು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry