ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎದುರಾಳಿ ಇಂದು ನಿರ್ಣಯ

ಶ್ರೀಲಂಕಾ ವಿರುದ್ಧ ಇರಾನ್‌ಗೆ ಜಯ
Last Updated 25 ಅಕ್ಟೋಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಫಿಬಾ 16 ವರ್ಷದೊ ಳಗಿನ ಬಾಲಕಿಯರ ಏಷ್ಯಾಕಪ್‌ ಬ್ಯಾಸ್ಕೆ ಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿರುವ ತಂಡ ಯಾವುದು ಎಂಬುದು ಗುರುವಾರ ನಿರ್ಧಾರವಾಗಲಿದೆ. ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸುವ ಶ್ರೀಲಂಕಾ ಮತ್ತು ಕಜಕಸ್ತಾನ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಶುಕ್ರವಾರ ಭಾರತಕ್ಕೆ ಸವಾಲೆಸೆಯಲಿದೆ.

ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ಬಿ ವಿಭಾಗದ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಈ ಮೂಲಕ ಭಾರತ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲೂ ಗೆಲುವಿನ ಭರವಸೆ ಹೊಂದಿದೆ.

ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 69 ಪಾಯಿಂಟ್‌ಗಳ ಅಂತರ ದಿಂದ ಗೆದ್ದ ಭಾರತ ನಂತರ ಶ್ರೀಲಂಕಾ ಎದುರು 28 ಪಾಯಿಂಟ್‌ಗಳಿಂದ ಮತ್ತು ಇರಾನ್ ವಿರುದ್ಧ 44 ಪಾಯಿಂಟ್‌ಗಳ ಜಯ ಗಳಿಸಿತ್ತು.

ಸಂಘಟಿತ ಹೋರಾಟದ ಮೂಲಕ ಎಲ್ಲ ಪಂದ್ಯಗಳಲ್ಲೂ ಎದುರಾ ಳಿಗಳ ಮೇಲೆ ಆಧಿಪತ್ಯ ಸ್ಥಾಪಿಸಿತ್ತು. ಕಜಕಸ್ತಾನವೂ ಗುಂಪು ಹಂತದ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 50–64 ಪಾಯಿಂಟ್‌ ಗಳ ಸೋಲುಂಡ ತಂಡ ಮೂರನೇ ದಿನ ಮಾಲ್ಡಿವ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಒಟ್ಟು 114 ಪಾಯಿಂಟ್ ಗಳಿಸಿದ ತಂಡ ಎದುರಾಳಿಗಳಿಗೆ ಕೇವಲ 10 ಪಾಯಿಂಟ್ ಬಿಟ್ಟುಕೊಟ್ಟಿತ್ತು. ಶ್ರೀಲಂಕಾ ಒಂದು ಪಂದ್ಯದಲ್ಲಿ ಮಾತ್ರ ಜಯ ಗಳಿಸಿತ್ತು. ಭಾರತದ ಎದುರು 58–86ರಿಂದ ಸೋತಿದ್ದ ತಂಡ ಬುಧವಾರ ಇರಾನ್‌ ವಿರುದ್ಧವೂ ಸೋಲು ಕಂಡಿದೆ. ನೇಪಾಳ ವಿರುದ್ಧ 68–48ರಿಂದ ಗೆಲುವು ಸಾಧಿಸಿತ್ತು.

ಲಂಕಾವನ್ನು ಮಣಿಸಿದ ಇರಾನ್‌

ಕೋರಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಬಿ ವಿಭಾಗದ ’ಎ’ ಗುಂಪಿನ ಪಂದ್ಯದಲ್ಲಿ ಇರಾನ್‌ ತಂಡ ಶ್ರೀಲಂಕಾವನ್ನು 84–76 ರಿಂದ ಮಣಿಸಿತು.

ಎರಡೂ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವುದರಿಂದ ಫಲಿತಾಂಶದ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿರಲಿಲ್ಲ. ನಾಲ್ಕೂ ಕ್ವಾರ್ಟರ್‌ಗಳಲ್ಲಿ ಇರಾನ್‌ಗೆ ಶ್ರೀಲಂಕಾ ಉತ್ತಮ ಪ್ರತಿಸ್ಪರ್ಧೆ ಒಡ್ಡಿತು. ಆದರೆ ಗೆಲುವು ಇರಾನ್‌ ಪಾಲಾಯಿತು.

ಫಾತೆಮೆ ಗಜ್ವಿನಿ ಇರಾನ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟು 26 ಪಾಯಿಂಟ್ ಕಲೆ ಹಾಕಿದ ಅವರು ಎಂಟು ರಿಬೌಂಡ್ ಮತ್ತು ಮೂರು ಅಸಿಸ್ಟ್‌ಗಳಲ್ಲಿ ಮಿಂಚಿದರು. ಜಿ.ಮಲೇಕಿ 24 ರಿಬೌಂಡ್‌ಗಳ ಮೂಲಕ ಮಿಂಚಿ ಫಾತೆಮೆ ಅವರಿಗೆ ಉತ್ತಮ ಬೆಂಬಲ ನೀಡಿದರು. ಲಿಯಾರಾ ಮಾಲ್ಮಿ ಹಟಿಯಾರಚಿ ಅವರು ಶ್ರೀಲಂಕಾ ತಂಡಕ್ಕೆ ಒಟ್ಟು 21 ಪಾಯಿಂಟ್ ತಂದುಕೊಟ್ಟರು. 16 ರಿಬೌಂಡ್‌ಗಳ ಮೂಲಕವೂ ಮಿಂಚಿದರು.

ಸಮಾನ ಹೋರಾಟ

ಮೊದಲ ಕ್ವಾರ್ಟರ್‌ನಲ್ಲಿ ಒಂದು ಪಾಯಿಂಟ್‌ (20–19) ಮುನ್ನಡೆ ಗಳಿಸಿದ ಇರಾನ್‌ಗೆ ಎರಡನೇ ಕ್ವಾರ್ಟರ್‌ನಲ್ಲೂ ಸಿಕ್ಕಿದ್ದು ಒಂದು ಪಾಯಿಂಟ್‌ ಮುನ್ನಡೆ ಮಾತ್ರ (15–14).

ಮೂರನೇ ಕ್ವಾರ್ಟರ್‌ನಲ್ಲಿ 25–23 ರಿಂದ ಇರಾನ್ ಮುನ್ನಡೆಯಿತು. ಹೀಗಾಗಿ ಅಂತಿಮ ಕ್ವಾರ್ಟರ್‌ ನಿರ್ಣಾಯಕವಾಯಿತು. ಕೇವಲ ನಾಲ್ಕು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಕಣಕ್ಕೆ ಇಳಿದ ಇರಾನ್‌ಗೆ ಪ್ರಬಲ ಪ್ರತಿಸ್ಪರ್ಧೆ ಎದುರಾ ಯಿತು. ಆದರೆ ಪಟ್ಟು ಬಿಡದ ಆಟಗಾ ರ್ತಿಯರು 24 ಪಾಯಿಂಟ್‌ಗಳನ್ನು ಹೆಕ್ಕಿದರು. ಶ್ರೀಲಂಕಾ 20 ಪಾಯಿಂಟ್ ಗಳಿಸಿ ಸೋಲೊಪ್ಪಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT