ಆಟಗಾರರ ಆಯ್ಕೆಯಲ್ಲಿ ಜಾತಿ ಬೇಧ ಇಲ್ಲ: ಹರ್ಭಜನ್‌ ಸಿಂಗ್‌

ಮಂಗಳವಾರ, ಜೂನ್ 25, 2019
27 °C

ಆಟಗಾರರ ಆಯ್ಕೆಯಲ್ಲಿ ಜಾತಿ ಬೇಧ ಇಲ್ಲ: ಹರ್ಭಜನ್‌ ಸಿಂಗ್‌

Published:
Updated:

ಬೆಂಗಳೂರು: ಭಾರತದಲ್ಲಿ  ಎಲ್ಲ ಧರ್ಮದವರೂ ಸೌಹಾರ್ದದಿಂದ ಬಾಳುತ್ತಿದ್ದಾರೆ. ಕ್ರಿಕೆಟ್ ತಂಡದಲ್ಲಿ ಇರುವ ಪ್ರತಿಯೊಬ್ಬ ಆಟಗಾರ ಭಾರತೀಯನಾಗಿದ್ದಾನೆ. ಆವರು ತಮ್ಮ ಪ್ರತಿಭೆಯಿಂದ ಸ್ಥಾನ ಪಡೆದಿದ್ದಾರೆ. ಜಾತಿ, ಧರ್ಮ ಮತ್ತು ವರ್ಣಗಳಿಂದ ಅಲ್ಲ ಎಂದು ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು, ‘ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರೇಕಿಲ್ಲ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೀಗೆ ಎಷ್ಟು ಬಾರಿ ಆಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹರಭಜನ್ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry