ಮಂಗಳವಾರ, ಸೆಪ್ಟೆಂಬರ್ 17, 2019
25 °C

ಮೃಗಾಲಯಕ್ಕೆ ನುಗ್ಗಿದ್ದ ಚಿರತೆ ಸೆರೆ

Published:
Updated:
ಮೃಗಾಲಯಕ್ಕೆ ನುಗ್ಗಿದ್ದ ಚಿರತೆ ಸೆರೆ

ಮೈಸೂರು: ಚಾಮರಾಜೇಂದ್ರ ಮೃಗಾಲಯಕ್ಕೆ ಹೊರಗಿನಿಂದ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ‌.

ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದ ಕಾರಣ ಮೃಗಾಲಯದಿಂದ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಪ್ರವಾಸಿಗರು ಮೃಗಾಲಯ ಪ್ರವೇಶಿಸಲು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿತ್ತು‌.ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಅವರು ಅಧಿಕಾರಿಗಳು ಚಿರತೆ ಬಂದಿರುವ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಮಾಧ್ಯಮಗಳ ಮೂಲಕ ನನಗೆ ವಿಷಯ ಗೊತ್ತಾಯಿತು’ ಎಂದ ಮಲ್ಲಿಗೆ ವೀರೇಶ್, ‘ಚಿರತೆ ಬಂದಿರುವುದಕ್ಕೆ ಭದ್ರತಾ ಲೋಪ ಕಾರಣವೆ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಇರಬಹುದು’ ಎಂದು ಪ್ರತಿಕ್ರಿಯಿಸಿದರು.

Post Comments (+)