ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಜನಸಂಖ್ಯೆ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ?

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪಲೊಂಗ್‌ಖಲಿ, ಬಾಂಗ್ಲಾದೇಶ (ಎಎಫ್‌ಪಿ): ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಸ್ವಯಂ ಸಂತಾನಶಕ್ತಿ ಹರಣ ಕಾರ್ಯಕ್ರಮ ಜಾರಿಗೊಳಿಸಲು ಬಾಂಗ್ಲಾದೇಶ ಸರ್ಕಾರ ಚಿಂತನೆ ನಡೆಸಿದೆ.

ಜನನ ಪ್ರಮಾಣ ನಿಯಂತ್ರಣಕ್ಕೆ ಈ ಹಿಂದೆ ಸರ್ಕಾರ ನಡೆಸಿದ ಯತ್ನ ವಿಫಲವಾಗಿತ್ತು.

ಲೈಂಗಿಕ ಕಿರುಕುಳ: ಬುಷ್‌ ವಿರುದ್ಧ ಆರೋಪ

ವಾಷಿಂಗ್ಟನ್‌ (ಎಪಿ): ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌.ಡಬ್ಲ್ಯೂ ಬುಷ್‌ ವಿರುದ್ಧ ಇನ್ನೂ ಇಬ್ಬರು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

2014ರಲ್ಲಿ ಬುಷ್‌ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಲೇಖಕಿ ಕ್ರಿಶ್ಚಿನಾ ಬೇಕರ್‌ ಕ್ಲೈನ್‌, ರಾಜಕಾರಣಿ ಅಮಂದಾ ಸ್ಟ್ಯಾಪಲ್ಸ್‌ ಹೇಳಿದ್ದಾರೆ.

‘ಬಂಧಿತ ‘ಜಿಹಾದಿ ಜಾಕ್‌’ ಐಎಸ್‌ ಸದಸ್ಯ’

ಲಂಡನ್‌ (ಪಿಟಿಐ): ಬಂಧಿತ ‘ಜಿಹಾದಿ ಜಾಕ್‌’ (ಜಾಕ್‌ ಲೆಟ್‌) ಐಎಸ್‌ ಉಗ್ರರ ಸಂಪರ್ಕ ಜಾಲದ ಸದಸ್ಯ ಎಂದು ಮಾಧ್ಯಮಗಳ ವರದಿ
ತಿಳಿಸಿದೆ.ಸಿರಿಯಾದ ರಕ್ಕಾಗೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಜಾಕ್‌ನನ್ನು ಐಎಸ್‌ ವಿರುದ್ಧದ ಕುರ್ದಿಶ್‌ ನೇತೃತ್ವದ ಪಡೆ 2014ರಲ್ಲಿ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT