ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ಒತ್ತಾಯದಿಂದ ದೇಶಭಕ್ತಿ ಹೇರಬಾರದು– ವಿದ್ಯಾಬಾಲನ್‌

ಗುರುವಾರ , ಜೂನ್ 27, 2019
23 °C

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ಒತ್ತಾಯದಿಂದ ದೇಶಭಕ್ತಿ ಹೇರಬಾರದು– ವಿದ್ಯಾಬಾಲನ್‌

Published:
Updated:
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ಒತ್ತಾಯದಿಂದ ದೇಶಭಕ್ತಿ ಹೇರಬಾರದು– ವಿದ್ಯಾಬಾಲನ್‌

ನವದೆಹಲಿ: ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಸಾರವಾಗುವುದಕ್ಕೂ ಮೊದಲು ರಾಷ್ಟ್ರಗೀತೆ ಹಾಡುವ ವಿಚಾರ ಕುರಿತು ಮಾತನಾಡಿರುವ ಬಾಲಿವುಡ್‌ ನಟಿ ವಿದ್ಯಾಬಾಲನ್‌, ‘ದೇಶಭಕ್ತಿಯನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ದೇಶದಾದ್ಯಂತ ಚರ್ಚೆಯಲ್ಲಿರುವ ಸೂಕ್ಷ್ಮ ವಿಚಾರದ ಕುರಿತು ಕೇಂದ್ರ ಸಿನಿಮಾ ಪ್ರಮಾಣಪತ್ರ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ರಾಷ್ಟ್ರಗೀತೆ ಹಾಡುವ ಮೂಲಕ ದಿನ ಆರಂಭಿಸಲು ನೀವೇನು ಶಾಲೆಯಲ್ಲಿಲ್ಲ. ಹಾಗಾಗಿ, ಸಿನಿಮಾ ಪ್ರಸಾರವಾಗುವುದಕ್ಕೆ ಮೊದಲು ರಾಷ್ಟ್ರಗೀತೆಯನ್ನು ಹಾಡಿಸಬಾರದು. ದೇಶಭಕ್ತಿಯನ್ನು ಬಲವಂತವಾಗಿ ಹೇರಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಹೇಳಿದ್ದಾರೆ.

ತಾನು ದೇಶವನ್ನು ಪ್ರೀತಿಸುವುದಾಗಿ ಹೇಳಿದ ನಟಿ, ‘ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಅವಶ್ಯಕತೆ ನನಗಿಲ್ಲ. ಆದರೆ, ಯಾವಾಗ ರಾಷ್ಟ್ರಗೀತೆಯನ್ನು ಕೇಳಿದರೂ, ನಾನು ಎಲ್ಲೇ ಇದ್ದರೂ ಎದ್ದುನಿಂತು ಗೌರವಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry