ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕತೆ ಎಲ್ಲಿದೆ?

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬ್ಯಾಂಕುಗಳಿಗೆ ಮರು ಬಂಡವಾಳ ಯೋಜನೆಯನ್ನು ‘ಉದ್ಯಮಿಗಳ ಜೇಬು ತುಂಬಿಸುವ ಯೋಜನೆ’ ಎಂದು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಭ್ರಮನಿರಸನವಾದಂತಿದೆ. ಅವರು ಯಾವ ಉದ್ಯಮಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡುತ್ತಿರುವರೋ ಅವರೆಲ್ಲರಿಗೂ ಕಾಂಗ್ರೆಸ್ ಆಡಳಿತಗಾರರು ರತ್ನಗಂಬಳಿ ಹಾಸಿಲ್ಲವೇ? ಈ ಉದ್ಯಮಿಗಳಿಗೆ ಅನುಕೂಲವಾಗುವಂತಹ ಆರ್ಥಿಕ ನೀತಿಗಳನ್ನು ಜಾರಿ ಮಾಡಲಿಲ್ಲವೇ?

ಚುನಾವಣೆಗಳು ಹತ್ತಿರವಾಗುತ್ತಿದ್ದ ಸಮಯದಲ್ಲಿ ಓಲೈಕೆ ರಾಜಕಾರಣದ ಪ್ರತೀಕವಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಏಕಾಏಕಿ ₹ 75,000 ಕೋಟಿ ಸಾಲವನ್ನು ಮನ್ನಾ ಮಾಡಿದ್ದಲ್ಲದೆ ಸರ್ಕಾರದ ವತಿಯಿಂದ ಕೊಡಬೇಕಿದ್ದ ಮನ್ನಾ ಮೊತ್ತವನ್ನು ವಾರ್ಷಿಕ ಕಂತುಗಳಲ್ಲಿ ನೀಡಲೆಣಿಸಿದ್ದೂ ಬ್ಯಾಂಕುಗಳ ಇಂದಿನ ಸ್ಥಿತಿಗೆ ಕಾರಣ ಎಂಬುದನ್ನು ಕಾಂಗ್ರೆಸ್ಸಿಗರು ಮರೆತಿರಬೇಕು.

ಹೀಗಿರುವಾಗ ಏನೋ ಹೇಳಿ ಜನರನ್ನು ತಪ್ಪು ದಾರಿಗೆಳೆಯುವುದು ಕಾಂಗ್ರೆಸ್ ಪಕ್ಷಕ್ಕೆ ತಕ್ಕುದಲ್ಲ. ಇನ್ನಾದರೂ ಪಕ್ಷ ಅಳೆದು ತೂಗಿ ವಿಮರ್ಶಿಸಲಿ.
-ಬಿ. ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT