ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ರಾಷ್ಟ್ರೀಯ ಅಥ್ಲೆಟಿಕ್ಸ್‌

Last Updated 29 ಅಕ್ಟೋಬರ್ 2017, 20:11 IST
ಅಕ್ಷರ ಗಾತ್ರ

ನವದೆಹಲಿ: ಚೊಚ್ಚಲ ರಾಷ್ಟ್ರೀಯ 400 ಮೀಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಮುಂದಿನ ವರ್ಷದ ಜುಲೈ 1 ರಂದು ಮೈಸೂರಿನಲ್ಲಿ ನಡೆಯಲಿದೆ.

ಸ್ಪರ್ಧೆ ಈ ವರ್ಷದ ಅಕ್ಟೋಬರ್‌ 22 ಮತ್ತು 23ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಕೆಲ ಕಾರಣಗಳಿಂದಾಗಿ ಫೆಡರೇಷನ್‌ ಇದನ್ನು ಮುಂದೂಡಿದೆ. ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ಭಾನುವಾರ ಈ ವಿಷಯವನ್ನು ಬಹಿರಂಗಗೊಳಿಸಿದೆ.

ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ ಎರಡನೇ ಲೆಗ್‌ನ ಸ್ಪರ್ಧೆಯನ್ನು ಜುಲೈ 6ರಂದು ಕರ್ನಾಟಕದ ವಿದ್ಯಾನಗರ ಕ್ರೀಡಾ ಶಾಲೆಯ ಟ್ರ್ಯಾಕ್‌ನಲ್ಲಿ ನಡೆಸಲು ಎಎಫ್‌ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. 

‘ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ ಕಳಪೆ ಗುಣಮಟ್ಟದ್ದಾಗಿದ್ದು, ಇದನ್ನು ನಿಗದಿತ ಅವಧಿಯೊಳಗೆ ಸರಿಪಡಿಸಿದರೆ ಎರಡನೇ ಲೆಗ್‌ನ ಸ್ಪರ್ಧೆಯನ್ನು ವಿದ್ಯಾನಗರದಿಂದ ಕಂಠೀರವಕ್ಕೆ ಸ್ಥಳಾಂತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಎಎಫ್‌ಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT