ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಾದ ಮೈಬೂಬ ನಗರ ರಸ್ತೆ

Last Updated 30 ಅಕ್ಟೋಬರ್ 2017, 6:41 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದ 14ನೇ ವಾರ್ಡ್‌ ವ್ಯಾಪ್ತಿಯ ಮೈಬೂಬ ನಗರವು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಪಕ್ಕಾ ರಸ್ತೆ, ಚರಂಡಿಗಳು ಸೇರಿದಂತೆ ಹಲವು ಮೂಲಸೌಲಭ್ಯಗಳು ಇಲ್ಲಿ ಮರೀಚಿಕೆಯಾಗಿವೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆ ಕೆಸರು ಗದ್ದೆಯಾಗಿ ಬದಲಾಗಿದೆ. ಇದರಿಂದ ಸ್ಥಳೀಯರ ಓಡಾಟಕ್ಕೆ ತೊಂದರೆ ಆಗುತ್ತಿದೆ.

‘ಮೈಬೂಬ ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಮಳೆ ನೀರು, ಮನೆಗಳ ಶೌಚಾಲಯಗಳ ನೀರು, ನಿತ್ಯದ ಬಳಕೆ ನೀರು ಎಲ್ಲವೂ ರಸ್ತೆ ಆವರಿಸುತ್ತದೆ. ಇದರಿಂದ ರಸ್ತೆಗೂ ಚರಂಡಿಗೂ ವ್ಯತ್ಯಾಸವೇ ತಿಳಿಯದಂಥ ಪರಿಸ್ಥಿತಿ ಇದೆ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಸೊಳ್ಳೆ ಕಾಟ: ‘ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಿದೆ. ಕೆಸರು ತುಂಬಿರುವ ಚರಂಡಿಗಳಿಂದ ದುರ್ನಾತ ಹರಡುತ್ತಿದ್ದು, ಮನೆಯಲ್ಲಿ ಕುಳಿತುಕೊಳ್ಳಲು ಆಗದಂತ ಸ್ಥಿತಿಯಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಾಲತೇಶ ಅಣ್ಣೀಗೇರಿ.

‘ಶಾಲೆ, ಕಾಲೇಜಿಗೆ ಹೋಗುವ ಮಕ್ಕಳಿಗೆ, ವಾಹನ ಸವಾರರಿಗೆ ತುಂಬಾ ಕಿರಿಕಿರಿಯಾಗಿದೆ. ಈ ಸಮಸ್ಯೆ ಪರಿಹಾರಿಸಬೇಕು ಎಂದು ಆಗ್ರಹಿಸಿ ವಾರ್ಡ್‌ನ ಸದಸ್ಯೆ ವಲೀಬಿ ದುಕಾನದಾರ ಮತ್ತು ಅಧಿಕಾರಿಗಳಿಗೆ ಮೌಖಿಕವಾಗಿ, ಲಿಖಿತವಾಗಿ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೂ ಈ ವರೆಗೆ ಸಮಸ್ಯೆಗಳು ಪರಿಹಾರವಾಗಿಲ್ಲ’ ಎಂದು ಅವರು ದೂರಿದರು.

‘ಮೈಬೂಬ ನಗರದಲ್ಲಿನ ಸರ್ಕಾರಿ ಉರ್ದು ಪ್ರೌಢ ಶಾಲೆ ಹಿಂಬದಿ ರಸ್ತೆ, ಕಾರಡಗಿ ಪ್ಲಾಟ್‌ನ ರಸ್ತೆ ತೀರ ಹದಗೆಟ್ಟಿದೆ. ಈ ಕುರಿತು ಹತ್ತಾರು ಬಾರಿ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸಹ ಅಭಿವೃದ್ಧಿ ಕುರಿತು ಈ ವರೆಗೆ ಗಮನ ಹರಿಲ್ಲ. ಅದರಿಂದ ವಾರ್ಡ್‌ ಜನರ ಪ್ರಶ್ನೆ ಉತ್ತರ ನೀಡದ ಪರಿಸ್ಥಿತಿ ಎದುರಾಗಿದೆ’ ಎಂದು ವಾರ್ಡ್‌ ಸದಸ್ಯೆ ವಲೀಬಿ ದುಕಾನದಾರ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT