ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ ಸಾಹಿತ್ಯದಿಂದ ನೆಮ್ಮದಿ:ಸ್ವಾಮೀಜಿ

Last Updated 30 ಅಕ್ಟೋಬರ್ 2017, 7:19 IST
ಅಕ್ಷರ ಗಾತ್ರ

ಯಲಬುರ್ಗಾ: ಜನಸಾಮಾನ್ಯರಿಗೆ ಉತ್ತಮ ಸಂಸ್ಕಾರ ನೀಡುವ ದಾಸ ಸಾಹಿತ್ಯದ ಬಗ್ಗೆ ವ್ಯಾಪಕ ಪ್ರಚಾರ ನಡೆಯಬೇಕಾಗಿದೆ ಎಂದು ಕೋಲಾರ ಜಿಲ್ಲೆಯ ತಂಬಿಹಳ್ಳಿ ಮಾಧವ ತೀರ್ಥ ಮಠದ ಪೀಠಾಧಿಪತಿ ವಿದ್ಯಾಸಿಂಧು ಮಾಧವತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ರಾಯರಮಠದಲ್ಲಿ ಬ್ರಾಹ್ಮಣ ಸಮಾಜ, ಅಖಿಲ ಕರ್ನಾಟಕ ಹರಿದಾಸ ಕೂಟ ಜಿಲ್ಲಾ ಘಟಕ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಜಯದಾಸರ 262ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಳ ರೀತಿಯಲ್ಲಿ ಭಗವಂತನ ನಾಮಸ್ಮರಣೆಗೆ ದಾಸ ಸಾಹಿತ್ಯ ಪೂರಕವೂ ಆಗಿದೆ ಎಂದು ನುಡಿದರು.

ಮಂತ್ರಾಲಯದ ಗುರುಸಾರ್ವಭೌಮ ದಾಸಸಾಹಿತ್ಯ ವಿಶೇಷಾಧಿಕಾರಿ ಅಪ್ಪಣ್ಣಾಚಾರ ಮಾತನಾಡಿ, ಇಂತಹ ಉತ್ತಮ ಕಾರ್ಯಕ್ರಮಗಳ ಆಚರಣೆಯಿಂದ ನೆಮ್ಮದಿ ಜೊತೆಗೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ವಿಜಯದಾಸರ ಸ್ಮರಣೆಗಾಗಿ ವಿಜಯ ವೈಭವ ಭಜನೆ, ಸಂಕೀರ್ತನೆ ಹಮ್ಮಿಕೊಂಡಿದ್ದರು. ಹಾಗೆಯೇ ಮಠದಲ್ಲಿ ಸಂಸ್ಥಾನ ಪೂಜೆ, ಹಸ್ತೋದಕ ನಡೆಯಿತು. ಸಂಜೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರಾಚಾರ ಗುನ್ನಾಳ, ಶ್ರೀನಿವಾಸರಾವ್ ಕುಲಕರ್ಣಿ, ಅಡವಿರಾವ್ ದೇಸಾಯಿ ವಜ್ರಬಂಡಿ, ವಸಂತರಾವ್ ಕುಲಕರ್ಣಿ, ಶೇಷಗಿರಿರಾವ್ ಪಟವಾರಿ, ರಾಮರಾವ್ ಗಂಗಾಖೇಡ, ಸುದೀರ್ ಕೊರ್ಲಳ್ಳಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT