ಶನಿವಾರ, ಮಾರ್ಚ್ 6, 2021
18 °C

ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹4.50 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹4.50 ಹೆಚ್ಚಳ

ನವದೆಹಲಿ: ಸಹಾಯಧನ ಸಹಿತ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹4.50 ಹೆಚ್ಚಳಗೊಂಡಿದೆ. ಇದರಿಂದ ಪ್ರತಿ ಸಿಲಿಂಡರ್ ದರ ₹495.69ಕ್ಕೆ ಏರಿಕೆಯಾಗಿದೆ.

ಸಹಾಯಧನ ರಹಿತ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್‌ಗೆ ₹93 ಹೆಚ್ಚಳಗೊಂಡಿದ್ದು, ₹742ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಇಂಧನ ದರವನ್ನು ಶೇ 2ರಷ್ಟು ಹೆಚ್ಚಿಸಲಾಗಿದೆ. ಆಗಸ್ಟ್‌ ನಂತರದಲ್ಲಿ ಇಂಧನ ದರ ಹೆಚ್ಚಿರುವುದು ಇದು ನಾಲ್ಕನೇ ಬಾರಿಯಾಗಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.

2016ರ ಜುಲೈ ನಿಂದ ಇಲ್ಲಿಯವರೆಗೂ 19 ಬಾರಿ ದರ ಹೆಚ್ಚಳವಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.