ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಫೋನ್‌ 10’ ನಾಳೆ ಮಾರುಕಟ್ಟೆಗೆ ಬಿಡುಗಡೆ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪಲ್‌ ತಯಾರಿಸಿರುವ ದುಬಾರಿ ಮೊಬೈಲ್‌ ‘ಐಫೋನ್‌ 10’ ನವೆಂಬರ್‌ 3 ರಿಂದ ಸ್ಥಳೀಯ ಗ್ರಾಹಕರ ಕೈಸೇರಲಿದೆ.

ಐಫೋನ್‌ ಖರೀದಿಸಲು ಜಾಗತಿಕ ಗ್ರಾಹಕರಿಗೆ ಒದಗಿಸಿದ್ದ ಮುಂಗಡ ಕಾಯ್ದಿರಿಸುವ ಸೌಲಭ್ಯವನ್ನು ಈಗ ಭಾರತದ ಗ್ರಾಹಕರಿಗೂ ವಿಸ್ತರಿಸಲಾಗಿದೆ. ಹೀಗಾಗಿ ಐಫೋನ್‌ ಅಭಿಮಾನಿಗಳು ಈ ಮೊಬೈಲ್‌ ಖರೀದಿಸಲು ಮುಗಿ ಬಿದ್ದಿದ್ದು, ಮೊಬೈಲ್‌  ‌ಕೈಸೇರಲು ಅವರೀಗ ಹೆಚ್ಚು ದಿನಗಳವರೆಗೆ ಕಾಯಬೇಕಾಗಿಲ್ಲ.

‘ಐಫೋನ್‌ 10’ 5.8 ಗಾತ್ರದ ವಿಶಾಲ ಪರದೆ, 64 ಜಿಬಿ ಮತ್ತು 256 ಜಿಬಿ ಸಾಮರ್ಥ್ಯದ ಎರಡು ಬಣ್ಣಗಳ ಮಾದರಿಗಳಲ್ಲಿ ಲಭ್ಯ ಇರಲಿದೆ. ಇವುಗಳ ಆರಂಭಿಕ ಬೆಲೆ ₹ 89 ಸಾವಿರ ಇರಲಿದೆ. ಗರಿಷ್ಠ ಬೆಲೆ ₹ 1,02,000 ಇದೆ.

ಇದೇ ಮೊದಲ ಬಾರಿಗೆ ‘ಐಫೋನ್‌ 10’ರ ಜಾಗತಿಕ ಬಿಡುಗಡೆ ಜತೆಗೆ ಭಾರತದಲ್ಲಿಯೂ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

‘ಬೆಲೆಗೆ ಹೆಚ್ಚು ಆದ್ಯತೆ ನೀಡುವ ಭಾರತದಲ್ಲಿ ಈ ಐಫೋನ್‌ಗೆ ಕಂಡುಬರುತ್ತಿರುವ ಬೇಡಿಕೆ ಅಚ್ಚರಿದಾಯಕವಾಗಿದೆ’ ಎಂದು ಮಾರುಕಟ್ಟೆ ವಿಶ್ಲೇಷಕ ಅಮಿತ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಐಫೋನ್‌ 8’ಗೆ ಅಮೆರಿಕ, ಕೆನಡಾ ಮತ್ತು ಭಾರತದಲ್ಲಿಯೂ ಕಡಿಮೆ ಬೇಡಿಕೆ ಕಂಡುಬಂದಿತ್ತು. ಇದರಿಂದ ಆ್ಯ‍ಪಲ್‌ ಇಂಕ್‌ನ ಷೇರು ಬೆಲೆ ಶೇ 3ರಷ್ಟು ಕುಸಿತ ಕಂಡಿತ್ತು. ಈ ಕಾರಣಕ್ಕೆ ‘ಐಫೋನ್‌ 10’ರ ಜಾಗತಿಕ ಮಾರಾಟವು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT