ಭಾನುವಾರ, ಮಾರ್ಚ್ 7, 2021
19 °C

ಹಿಮಾಲಯಕ್ಕೆ ಧಕ್ಕೆ: ಅಮೆರಿಕ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಹಿಮಾಲಯಕ್ಕೆ ಧಕ್ಕೆ: ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್: ಹವಾಮಾನ ವೈಪರೀತ್ಯದಿಂದ ಹಿಮಾಲಯ ಭಾಗದ, ಅದರಲ್ಲೂ ಭಾರತ–ಪಾಕಿಸ್ತಾನ ಗಡಿಯಲ್ಲಿ ಅಗಾಧ ಭೌಗೊಳಿಕ ಪರಿಣಾಮ ಉಂಟಾಗುತ್ತದೆ ಎಂದು ಅಮೆರಿಕದ ಸಂಸದ ಶೆಲ್ಡನ್ ವೈಟ್‌ಹೌಸ್ ಅವರು ಎಚ್ಚರಿಸಿದ್ದಾರೆ.

ಅಮೆರಿಕದ ಪ್ರಮುಖ ಚಿಂತಕರ ಚಾವಡಿ ಹಡ್ಸನ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ’ಹಿಮಾಲಯ’ ಕುರಿತ ಚರ್ಚೆಯಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.

ಉಭಯ ದೇಶಗಳ ಬಿಕ್ಕಟ್ಟಿನ ಆಚೆಗೂ ಹವಾಮಾನ ವೈಪರೀತ್ಯವು ಹಿಮಾಲಯ ಭಾಗದಲ್ಲಿ ನೀರಿನ ಹರಿವನ್ನು ಅಸ್ಥಿರಗೊಳಿಸುತ್ತದೆ. ಇದು ವಿನಾಶಕ್ಕೂ ಕಾರಣವಾಗುತ್ತದೆ ಎಂದಿದ್ದಾರೆ.

‘ಭಾರತ ಭಾಗದಲ್ಲಿರುವ ನೀರ್ಗಲ್ಲು ಕರಗುವ ಕಾರಣ ಪಾಕಿಸ್ತಾನದ ಮುಖ್ಯ ನದಿಗಳು ತುಂಬಿ ಹರಿಯುತ್ತವೆ. ಹಿಮ ಹೆಚ್ಚು ಕರಗುವುದರಿಂದ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗುತ್ತದೆ. ಮುಂಗಾರು ವೇಳೆ ಭಾರಿ ಮಳೆ ಉಂಟಾಗಲೂ ಹವಾಮಾನ ವೈಪರೀತ್ಯ ಕಾರಣವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಹವಾಮಾನ ವೈಪರೀತ್ಯದಿಂದ 2100ರ ವೇಳೆಗೆ ಹಿಮಾಲಯದ ನೀರ್ಗಲ್ಲಿನ ಮೂರು ಭಾಗ ಕಡಿತವಾಗಲಿದೆ ಎಂದು ಅವರು ಅಧ್ಯಯನವೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.