ಶುಕ್ರವಾರ, ಫೆಬ್ರವರಿ 26, 2021
30 °C

ಶಂಕರನಾರಾಯಣನ್‌ಗೆ 'ಸಂಗೀತ ಸುರಭಿ' ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕರನಾರಾಯಣನ್‌ಗೆ 'ಸಂಗೀತ ಸುರಭಿ' ಗೌರವ

ಕೋರಮಂಗಲದ 'ನಾದ ಸುರಭಿ' ಸಂಸ್ಥೆಯ ಪ್ರತಿಷ್ಠಿತ 'ಸಂಗೀತ ಸುರಭಿ' ಗೌರವಕ್ಕೆ ಈ ಬಾರಿ ಕರ್ನಾಟಕ ಸಂಗೀತದ ಹಿರಿಯ ವಿದ್ವಾಂಸ ಟಿ.ವಿ.ಶಂಕರನಾರಾಯಣನ್ (ಟಿ.ವಿ.ಎಸ್.) ಪಾತ್ರರಾಗಿದ್ದಾರೆ.

ಶಂಕರನಾರಾಯಣನ್ (ಜನನ: 1945) ಅವರು ತಮ್ಮ ಸೋದರ ಮಾವ ಮಧುರೆ ಮಣಿ ಅಯ್ಯರ್ ಅವರಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತ ಕಲಿತು, 23ನೇ ವಯಸ್ಸಿನಲ್ಲಿ ಪ್ರಥಮ ಕಛೇರಿ ನೀಡಿದರು. ಭಾವ ಪ್ರಧಾನ ಗಾಯನ ಅವರ ವೈಶಿಷ್ಟ್ಯ. ಶ್ರುತಿಶುದ್ಧತೆ ಹಾಗೂ ಸರ್ವಲಘು ಸ್ವರಪ್ರಸ್ತಾರಗಳಿಗೆ ಅವರು ಪ್ರಸಿದ್ಧರು. ‘ಮಧುರೆ ಮಣಿ ಬಾನಿ’ಯ ಶ್ರೇಷ್ಠ ಗಾಯಕ ಎನಿಸಿಕೊಂಡಿದ್ದಾರೆ. ಪದ್ಮಭೂಷಣ, ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ.

1993ರಲ್ಲಿ ಸ್ಥಾಪನೆಯಾದ ‘ನಾದ ಸುರಭಿ’ ಸಂಸ್ಥೆಯು ಪ್ರತಿ ತಿಂಗಳ ಮೂರನೇ ಭಾನುವಾರ ಕೋರಮಂಗಲದ ಇಂಡಿಯನ್ ಹೆರಿಟೇಜ್ ಅಕಾಡೆಮಿಯಲ್ಲಿ ‘ತಿಂಗಳ ಕಾರ್ಯಕ್ರಮ’ ನಡೆಸುತ್ತದೆ. ವಾರ್ಷಿಕ ಸಂಗೀತೋತ್ಸವದಲ್ಲಿ ಓರ್ವ ಹಿರಿಯ ಸಂಗೀತ ವಿದ್ವಾಂಸರನ್ನು 'ಸಂಗೀತ ಸುರಭಿ' ಬಿರುದು ಹಾಗೂ ಹಮ್ಮಿಣಿಯೊಂದಿಗೆ ಸನ್ಮಾನಿಸುವ ಪರಿಪಾಠವನ್ನು ಹೊಂದಿದೆ. ಯುವಕಲಾವಿದರಾಗಿ ಪ್ರತಿವರ್ಷ ಆಗಸ್ಟ್‌ ತಿಂಗಳಲ್ಲಿ ವಿಶೇಷ ಸಂಗೀತೋತ್ಸವ ಆಯೋಜಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.