ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂತ್ಲಿ ಶಿರೂರು ಕೆರೆಗೆ ಬಾಗಿನ ಅರ್ಪಣೆ

Last Updated 4 ನವೆಂಬರ್ 2017, 6:49 IST
ಅಕ್ಷರ ಗಾತ್ರ

ಡಂಬಳ: ‘ನೀರನ್ನು ಜೀವದಂತೆ ರಕ್ಷಣೆ ಮಾಡಬೇಕು, ಮಿತವಾಗಿ ಬಳಸಬೇಕು’ ಎಂದು ಶಾಂತವೀರ ಶರಣರು ರೈತರಿಗೆ ಸಲಹೆ ನೀಡಿದರು. ಹೋಬಳಿ ವ್ಯಾಪ್ತಿಯ ಜಂತ್ಲಿ ಶಿರೂರ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ಗ್ರಾಮದ ಕೆರೆ ತುಂಬಿದ್ದು, ರೈತರಿಗೆ ವರದಾನವಾಗಿದೆ. ರೈತರು ವಿವಿಧ ಬೆಳೆ ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಜಲ ಸಂರಕ್ಷಣೆ ಸರ್ಕಾರದ ಮಾತ್ರ ಕೆಲಸವಲ್ಲ. ನಾಡಿನ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ’ ಎಂದರು.

‘ಸಿಂಗಟಾಲೂರು ಏತ ನೀರಾವರಿಯಿಂದ ಹತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಿದೆ. ಡಂಬಳ, ಜಂತ್ಲಿ ಶಿರೂರ, ತಾಮ್ರಗುಂಡಿ, ಹಿರೇವಡ್ಡಟ್ಟಿ, ಬಸಾಪುರ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗಿದೆ’ ಎಂದು ಶಾಸಕ ಜಿ.ಎಸ್ ಪಾಟೀಲ ಹೇಳಿದರು.

ಗೋಣಿಬಸಪ್ಪ ಕೊರ್ಲಹಳ್ಳಿ, ಈರಣ್ಣ ನಾಡಗೌಡ್ರ, ರಾಮಣ್ಣ ವಡ್ಡಟ್ಟಿ, ಬಿ.ಎಫ್ ಈಟಿ, ರೇಣುಕಾ ಕೊರ್ಲಹಳ್ಳಿ, ಬಸಪ್ಪ ಮಲ್ಲನಾಯ್ಕರ, ರೇಣುಕಾ ಶಿರುಂಧ, ಹಾಲಪ್ಪ ಕಬ್ಬೆರಳ್ಳಿ, ಹೇಮಣ್ಣ ಪೂಜಾರ, ಬಾಬು ಚನ್ನಳ್ಳಿ, ಗವಿಸಿದ್ಧಯ್ಯ ಹಳ್ಳಿಕೇರಿಮಠ, ಬಸವರಾಜ ನವಲಗುಂದ, ಯುಸೂಫ್ ಇಟಗಿ, ಮಲ್ಲನಗೌಡ ಪಾಟೀಲ, ಶಂಕರಗೌಡ ಕಲಿಕೇರಿ, ಗಂಗಯ್ಯ ಹಿರೇಮಠ ಎಂ.ಡಿ ತೋಗುಣಿಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT