ಶುಕ್ರವಾರ, ಮಾರ್ಚ್ 5, 2021
21 °C

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ: ಸರಣಿ ಜಯದ ಮೇಲೆ ಕೊಹ್ಲಿ ಪಡೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ: ಸರಣಿ ಜಯದ ಮೇಲೆ ಕೊಹ್ಲಿ ಪಡೆ ಕಣ್ಣು

ರಾಜ್‌ಕೋಟ್: ಭಾರತ ಎದುರಿನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್‌ ಜಯಿಸಿರುವ ನ್ಯೂಜಿಲೆಂಡ್‌ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ.

ಸರಣಿ ಜಯದ ಕನಸನ್ನು ಜೀವಂತ ಇರಿಸಬೇಕಾದರೆ ಕೇನ್‌ ವಿಲಿಯಮ್ಸ್‌ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಆದರೆ, ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರ ವಿರಾಟ್‌ ಕೊಹ್ಲಿ ಪಡೆಯದ್ದು. 

ಭಾರತದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದು, ಆರಂಭಿಕ ಆಟಗಾರರಾರ ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ನಾಯಕ ವಿರಾಟ್‌ ಕೊಹ್ಲಿ, ಮಹೇಂದ್ರಸಿಂಗ್‌ ದೋನಿ, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಲ ನೀಡಲಿದ್ದಾರೆ.

ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ ಜತೆಗೆ ಯಜುವೇಂದ್ರ ಜಹಾಲ್‌ ಹಾಗೂ ಅಕ್ಷರ್‌ ಪಟೇಲ್‌ ನ್ಯೂಜಿಲೆಂಡ್‌ ಪಡೆಯನ್ನು ಕಾಡಲು ಸಜ್ಜಾಗಿದ್ದಾರೆ.

ತಂಡ ಇಂತಿದೆ

ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್‌, ಶಿಖರ್ ಧವನ್‌, ಮಹೇಂದ್ರ ಸಿಂಗ್ ದೋನಿ, ಶ್ರೇಯಸ್‌ ಅಯ್ಯರ್‌, ದಿನೇಶ್ ಕಾರ್ತಿಕ್‌, ಕುಲದೀಪ್‌ ಯಾದವ್‌, ಭುವನೇಶ್ವರ್ ಕುಮಾರ್‌, ಮಹಮ್ಮದ್ ಸಿರಾಜ್‌, ಆಶಿಶ್ ನೆಹ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌, ಕೆ.ಎಲ್‌.ರಾಹುಲ್‌.

ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್‌ ಬೌಲ್ಟ್‌, ಟಾಮ್‌ ಬ್ರೂಸ್‌, ಕೊಲಿನ್ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್ ಗಪ್ಟಿಲ್‌, ಮ್ಯಾಟ್ ಹೆನ್ರಿ, ಟಾಮ್‌ ಲಥಾಮ್‌, ಹೆನ್ರಿ ನಿಕೊಲಸ್‌, ಅಡಮ್‌ ಮಿಲ್ನೆ, ಕೊಲಿನ್ ಮುನ್ರೊ, ಗ್ಲೆನ್‌ ಫಿಲಿಪ್ಸ್‌, ಮೈಕಲ್ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್ ಸೌಥಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.