ಬೆಳಗಾವಿ: ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಹಾಗೂ ವ್ಯವಸ್ಥಾಪನಾ ಕಾಲೇಜು ತಂಡದವರು ಇಲ್ಲಿ ಸೋಮವಾರ ಮುಕ್ತಾಯವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ 2017–18ನೇ ಸಾಲಿನ ಅಥ್ಲೆಟಿಕ್ ಕೂಟದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡರು.

ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅನುಕ್ರಮವಾಗಿ 35 ಹಾಗೂ 45 ಪಾಯಿಂಟ್ಗಳನ್ನು ಈ ತಂಡದವರು ಕಲೆ ಹಾಕಿದರು.

ಪುರುಷರ ವಿಭಾಗದಲ್ಲಿ 26 ಪಾಯಿಂಟ್ ಗಳಿಸಿದ ಮೂಡಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ತಂಡ ರನ್ನರ್ ಅಪ್, 22 ಪಾಯಿಂಟ್ ಪಡೆದ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಮೂರನೇ ಸ್ಥಾನ ಗಳಿಸಿತು.

ಮಹಿಳೆಯರ ವಿಭಾಗದಲ್ಲಿ 39 ಪಾಯಿಂಟ್ ಪಡೆದ ಮೂಡಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ತಂಡ ರನ್ನರ್ ಅಪ್ ಮತ್ತು 31 ಪಾಯಿಂಟ್ ಗಳಿಸಿದ ಕಾರ್ಕಳದ ಎನ್ಎಂಎಎಂ ತಾಂತ್ರಿಕ ಕಾಲೇಜು ಮೂರನೇ ಸ್ಥಾನ ಗಳಿಸಿತು.

ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ವೈಭವ ಪಾಟೀಲ (100 ಮೀಟರ್ ಓಟದಲ್ಲಿ ದ್ವಿತೀಯ, 200 ಮೀಟರ್ ಓಟದಲ್ಲಿ ಪ್ರಥಮ) ಮತ್ತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಎ. ಮನೀಷಾ (100 ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ) ಉತ್ತಮ ಅಥ್ಲೀಟ್ ಗೌರವ ಪಡೆದರು.

ಆರು ದಾಖಲೆ: ಕೂಟದಲ್ಲಿ ಒಟ್ಟು ಆರು ದಾಖಲೆಗಳು ನಿರ್ಮಾಣವಾದವು. ಈ ಪೈಕಿ 5 ದಾಖಲೆಗಳು ಮಹಿಳೆಯರ ವಿಭಾಗದಲ್ಲಿ ಬಂದವು. ಟ್ರಿಪಲ್ ಜಂಪ್ನಲ್ಲಿ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಎಸ್.ಪಿ. ಆದರ್ಶ (13.94 ಮೀಟರ್) ತಮ್ಮ ಹಿಂದಿನ ಸಾಧನೆ ಉತ್ತಮಪಡಿಸಿಕೊಂಡರು. ಅವರು ಕಳೆದ ವರ್ಷ 13.93 ಮೀಟರ್ ಜಿಗಿದಿದ್ದರು.

ಮಹಿಳೆಯರ ವಿಭಾಗ: 100 ಮೀಟರ್ ಹರ್ಡಲ್ಸ್ನಲ್ಲಿ ಮೂಡಬಿದಿರೆಯ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಸಿಮೋನಾ ಎಂ. (15.97 ಸೆ.), 2006–07ರಲ್ಲಿ ಬೆಂಗಳೂರಿನ ಎಸ್ಜೆಬಿಐಟಿಯಲ್ಲಿ ಟಿಒಸಿಇನ ಸ್ನೇಹಾ ಪಾಟೀಲ ಮಾಡಿದ್ದ ದಾಖಲೆ (16.10 ಸೆ.) ಮುರಿದರು.

ಶಾಟ್ಪಟ್ನಲ್ಲಿ ತುಮಕೂರಿನ ಸಿದ್ದಗಂಗಾ ತಾಂತ್ರಿಕ ಕಾಲೇಜಿನ ನಿವೇದಿತಾ ಸಾವಂತ್ (12.14 ಮೀಟರ್) ಎಸೆದು ಹಿಂದಿನ (11.91 ಮೀ.) ಸಾಧನೆ ಉತ್ತಮಪಡಿಸಿಕೊಂಡರು. 4X100 ಮೀಟರ್ ರಿಲೇಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ತಂಡದವರು (54.01 ಸೆ.) ಹಿಂದಿನ (54.71 ಸೆ.) ಕಾಲವನ್ನು ಉತ್ತಮಪಡಿಸಿಕೊಂಡರು. ಹಾಫ್ ಮ್ಯಾರಥಾನ್ನಲ್ಲಿ ಬೆಂಗಳೂರಿನ ಬಿಎನ್ಎಂ ತಾಂತ್ರಿಕ ಸಂಸ್ಥೆಯ ಶ್ರೇಯಾ ದೀಪಕ್ (1ಗಂಟೆ 42ನಿ.50.10 ಸೆ) 2015–16ನೇ ಸಾಲಿನಲ್ಲಿ ಬೆಂಗಳೂರಿನ ಸರ್ ಎಂವಿಐಟಿಯಲ್ಲಿ ಮಂಗಳೂರಿನ ನಿಟ್ಟೆ ಐಟಿಯ ಕೆ.ಜಿ. ರಕ್ಷಿತಾ ಮಾಡಿದ್ದ ದಾಖಲೆ (1ಗಂಟೆ 43.49 ಸೆ.) ಅಳಿಸಿ ಹಾಕಿದರು.

ಇತರ ಸ್ಪರ್ಧೆಗಳ ಫಲಿತಾಂಶಗಳು

ಪುರುಷರ ವಿಭಾಗ: 100 ಮೀಟರ್ ಓಟ: ಜೋಮನ್ ಕೆ. ಸಾಜಿ (ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು; 10.97ಸೆ.)–1. ವೈಭವ ಪಾಟೀಲ (ದಯಾನಂದಸಾಗರ್ ಎಂಜಿನಿಯರಿಂಗ್ ಕಾಲೇಜು; 11.03)–2. ಜಿ. ಅಶ್ವತ್ಥಗೌಡ (ಬೆಂಗಳೂರಿನ ಕೆ.ಎಸ್. ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜು; 11.05 ಸೆ.)–3; ಹಾಫ್ ಮ್ಯಾರಾಥಾನ್: ಟಿ.ಎಂ. ದೀಪು (ನಿಟ್ಟೆಯ ಎನ್ಎಂಎಂ ತಾಂತ್ರಿಕ ಕಾಲೇಜು; 1ಗಂಟೆ 24.ನಿ.06.17ಸೆ.)–1, ಕೆ.ಎ. ರೋಹನ್ ದೇವಯ್ಯ (ಮೈಸೂರಿನ ಎನ್ಐಇ ಕಾಲೇಜು; 1ಗಂಟೆ25ನಿ.28.62 ಸೆ.)–2, ನಿಶಾಲ್ ಜೆ. ರೈ (ಪುತ್ತೂರಿನ ವಿಸಿಇಟಿಯ; 1ಗಂಟೆ 26ನಿ. 04.76 ಸೆ.)–3; ಹ್ಯಾಮರ್ ಎಸೆತ: ಮೊಹಮ್ಮದ್ ಸೂಫಿಯಾನ (ಬೆಂಗಳೂರಿನ ಆಕ್ಸ್ಫರ್ಡ್ ಎಂಜಿನಿಯರಿಂಗ್ ಕಾಲೇಜು; 44.02 ಮೀ)–1, ಮೊಹಮ್ಮದ್ ಅಯ್ಯದ್ (ನಿಟ್ಟೆಯ ಎನ್ಎಂಎಎಂ ತಾಂತ್ರಿಕ ಕಾಲೇಜು; 32.63 ಮೀ)–2, ಅಬ್ದುಲ್ ಖಾದೀರ್ ತಲಾಲ್ (ಭಟ್ಕಳದ ಅಂಜುಮನ್ ತಾಂತ್ರಿಕ ಕಾಲೇಜು; 31.28 ಮೀ).–3.

ಮಹಿಳೆಯರ ವಿಭಾಗ: 100 ಮೀಟರ್ ಓಟ: ಎ. ಮನೀಷಾ (ಸಹ್ಯಾದ್ರಿ ಕಾಲೇಜು; 12.56 ಸೆ.)–1, ಮೇಧಾ ಆರ್. ಕಾಮತ್ (ಬೆಂಗಳೂರಿನ ಸರ್ಕಾರಿ ಎಸ್.ಕೆ.ಎಸ್.ಜೆ. ತಾಂತ್ರಿಕ ಕಾಲೇಜು; 12.88 ಸೆ)–2, ಪಲ್ಲವಿ ಶೆಟ್ಟಿ ( ಬೆಂಗಳೂರಿನ ಆಚಾರ್ಯ ತಾಂತ್ರಿಕ ಸಂಸ್ಥೆ; 13.53 ಸೆ)–3; ಹಾಫ್ ಮ್ಯಾರಾಥಾನ್: ಶ್ರೇಯಾ ದೀಪಕ್ (ಬೆಂಗಳೂರಿನ ಬಿಎನ್ಎಂಐಟಿಯ; 1ಗಂಟೆ 45ನಿ. 50.10 ಸೆ.)–1, ಜ್ಯೋತಿ (ನಿಟ್ಟೆಯ ಎನ್ಎಂಎಎಂ ಕಾಲೇಜು; 1ಗಂಟೆ 48 ನಿ. 46.90 ಸೆ.)–2, ಎಲ್. ಸುಮಾ ( ಬೆಂಗಳೂರಿನ ಆಚಾರ್ಯ ತಾಂತ್ರಿಕ ಸಂಸ್ಥೆ; 1ಗಂಟೆ 57 ನಿ. 42.65 ಸೆ)–3; ಹ್ಯಾಮರ್ ಎಸೆತ: ಎಸ್.ಆರ್. ಕೃಪಾ (ಮಂಗಳೂರಿನ ಸಹ್ಯಾದ್ರಿ ಕಾಲೇಜು; 21.38 ಮೀ)–1, ವೈಷ್ಣವಿ (ನಿಟ್ಟೆಯ ಎನ್ಎಂಎಎಂ ತಾಂತ್ರಿಕ ಸಂಸ್ಥೆ; 20.21 ಮೀ)–2, ಎಂ.ಎಸ್. ಶಿವರಂಜನಿ (ಮೂಡಬಿದಿರೆಯ ಆಳ್ವಾಸ್ ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಕಾಲೇಜು; 19.50 ಮೀ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.