ಗುರುವಾರ , ಫೆಬ್ರವರಿ 25, 2021
29 °C

ಧರ್ಮದ ಕಲ್ಪನೆ ಇಲ್ಲದ ಕೆಂಪಂಗಿಗಳು: ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮದ ಕಲ್ಪನೆ ಇಲ್ಲದ ಕೆಂಪಂಗಿಗಳು: ಹೆಗಡೆ

ಹೊರನಾಡು (ಕಳಸ): ಹೊರನಾಡಿನಲ್ಲಿ ಮಂಗಳವಾರ ಚಿಟ್ಟಾಣಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಎಡಪಂಥೀಯರ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು.

‘ಧರ್ಮದ ಮೂಲಭೂತ ಕಲ್ಪನೆ ಇಲ್ಲದೆ ವ್ಯಾಖ್ಯಾನ ಮಾಡುವ ಕೆಂಪಂಗಿಗಳ ಬಗ್ಗೆ ಯಾರೂ ತಲೆಕಡಿಸಿಕೊಳ್ಳಬೇಕಿಲ್ಲ. ಧರ್ಮ ಮತ್ತು ಹಿಂದುತ್ವದ ಬಗ್ಗೆ ಅವರ ಪ್ರಶ್ನೆಗಳೆಲ್ಲ ಮೂರ್ಖತನದ್ದು’ ಎಂದು ಟೀಕಿಸಿದರು.

‘ಸಾವಿರಾರು ವರ್ಷಗಳ ಚಿಂತನ, ವಿಮರ್ಶೆ, ಚರ್ಚೆ ಮತ್ತು ಪರಿಕಲ್ಪನೆಯ ವೈಚಾರಿಕ ಪರಿಪಾಕವೇ ಹಿಂದುತ್ವ’ ಎಂದು ಬಣ್ಣಿಸಿದ ಅವರು, ‘ಎಡ ಪಂಥೀಯರು ಗೀಚುವ ಕವನಕ್ಕಿಂತ ನಮ್ಮ ಹೆಣ್ಣು ಮಕ್ಕಳ ಕವನ ಹೆಚ್ಚು ಪ್ರಬುದ್ಧವಾಗಿರುತ್ತದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.