ಗುರುವಾರ , ಮಾರ್ಚ್ 4, 2021
20 °C

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಷೆಲ್‌ ಸ್ಟಾರ್ಕ್‌ ವಿಶ್ವದಾಖಲೆ: ಒಂದು ಪಂದ್ಯ, ಎರಡು ‘ಹ್ಯಾಟ್ರಿಕ್‌‘

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಷೆಲ್‌ ಸ್ಟಾರ್ಕ್‌ ವಿಶ್ವದಾಖಲೆ: ಒಂದು ಪಂದ್ಯ, ಎರಡು ‘ಹ್ಯಾಟ್ರಿಕ್‌‘

ಸಿಡ್ನಿ (ಎಎಫ್‌ಪಿ): ವೇಗದ ಬೌಲರ್‌ ಮಿಷೆಲ್‌ ಸ್ಟಾರ್ಕ್‌ ಮಂಗಳವಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

ಅವರು ಒಂದೇ ಪಂದ್ಯದಲ್ಲಿ ಎರಡು ಬಾರಿ ‘ಹ್ಯಾಟ್ರಿಕ್‌’ ವಿಕೆಟ್‌ ಸಾಧನೆ ಮಾಡಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಟೂರ್ನಿಯ ವೆಸ್ಟರ್ನ್‌ ಆಸ್ಟ್ರೇಲಿಯಾ ವಿರುದ್ಧದ ಹಣಾಹಣಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಅವರ ಅಪೂರ್ವ ಆಟದ ಬಲದಿಂದ ನ್ಯೂ ಸೌತ್‌ ವೇಲ್ಸ್‌ ತಂಡ 171ರನ್‌ಗಳಿಂದ ಗೆದ್ದಿದೆ.

ಸ್ಟಾರ್ಕ್‌ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಆಟಗಾರ. ಜೊತೆಗೆ ವಿಶ್ವದ ಎಂಟನೇ ಬೌಲರ್‌ ಕೂಡ.

ಮೊದಲ ಇನಿಂಗ್ಸ್‌ನಲ್ಲಿ 20 ಓವರ್‌ ಬೌಲ್‌ ಮಾಡಿದ ಸ್ಟಾರ್ಕ್‌, 56 ರನ್‌ ಕೊಟ್ಟು 4 ವಿಕೆಟ್‌ ಉರುಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ 15.1 ಓವರ್‌ಗಳಲ್ಲಿ 41ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.

*****

ಸ್ಟಾರ್ಕ್‌ ಹ್ಯಾಟ್ರಿಕ್‌ ಹಾದಿ

ಮೊದಲ ಇನಿಂಗ್ಸ್‌ನ 67ನೇ ಓವರ್

4ನೇ ಎಸೆತ, ಜೇಸನ್‌ ಬೆಹ್ರೆನ್‌ಡ್ರಾಫ್‌, ಬೌಲ್ಡ್‌

5ನೇ ಎಸೆತ,ಡೇವಿಡ್‌ ಮೂಡಿ, ಎಲ್‌ಬಿಡಬ್ಲ್ಯು

6ನೇ ಎಸೆತ,ಸಿಮನ್‌ ಮ್ಯಾಕಿನ್‌,ಬೌಲ್ಡ್‌

******

ಎರಡನೇ ಇನಿಂಗ್ಸ್‌, 76ನೇ ಓವರ್‌

5ನೇ ಎಸೆತ, ಜೇಸನ್‌ ಬೆಹ್ರೆನ್‌ಡ್ರಾಫ್‌,ಕ್ಯಾಚ್‌

6ನೇ ಎಸೆತ,ಡೇವಿಡ್‌ ಮೂಡಿ,ಬೌಲ್ಡ್‌

78ನೇ ಓವರ್‌

ಮೊದಲ ಎಸೆತ,ಜೊನಾಥನ್‌ ವೆಲ್ಸ್‌,ಕ್ಯಾಚ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.