ಅಕ್ಷರಮಿತಿ ಹೆಚ್ಚಿಸಿದ ಟ್ವಿಟರ್‌: ಅಭಿಪ್ರಾಯ ಪ್ರಕಟಿಸಲು 280 ಅಕ್ಷರಗಳು

7

ಅಕ್ಷರಮಿತಿ ಹೆಚ್ಚಿಸಿದ ಟ್ವಿಟರ್‌: ಅಭಿಪ್ರಾಯ ಪ್ರಕಟಿಸಲು 280 ಅಕ್ಷರಗಳು

Published:
Updated:
ಅಕ್ಷರಮಿತಿ ಹೆಚ್ಚಿಸಿದ ಟ್ವಿಟರ್‌: ಅಭಿಪ್ರಾಯ ಪ್ರಕಟಿಸಲು 280 ಅಕ್ಷರಗಳು

ಬೆಂಗಳೂರು: ಕ್ಷಿಪ್ರವಾಗಿ ಮಾಹಿತಿ ಹಂಚಿಕೊಳ್ಳಲು ಸಹಕಾರಿಯಾಗಿರುವ ಸಾಮಾಜಿಕ ಮಾಧ್ಯಮ ಟ್ವಿಟರ್‌ ಅಕ್ಷರಮಿತಿ 280ಕ್ಕೆ ಹೆಚ್ಚಿಸಿದೆ.

ಹೇಳಬೇಕಿರುವ ವಿಷಯವನ್ನು ಇನ್ನೂ ವಿಸ್ತಾರವಾಗಿ ಹೇಳಲು ಸಹಕಾರಿಯಾಗುವಂತೆ ಟ್ವಿಟರ್ ಅಕ್ಷರಮಿತಿಯನ್ನು 140ರಿಂದ 280ಕ್ಕೆ ಹೆಚ್ಚಿಸಿದೆ. 2006ರಲ್ಲಿ ಪ್ರಾರಂಭವಾದ ಟ್ವಿಟರ್‌ ಇದೇ ಮೊದಲ ಬಾರಿ ಅಕ್ಷರಮಿತಿ ವಿಸ್ತರಿಸಿದೆ.

ಈ ನಿರ್ಧಾರ ಸಂಕ್ಷಿಪ್ತ ಟ್ವೀಟ್‌ಗಳಿಂದಲೇ ಜನಪ್ರಿಯಗೊಂಡಿರುವ ಸಾಮಾಜಿಕ ಮಾಧ್ಯಮದ ಮೇಲೆ ನಕಾರಾತ್ಮಕ  ಪ್ರಭಾವ ಬೀರಬಹುದೆಂದು ಅಂದಾಜಿಸಿದ್ದ ಸಂಸ್ಥೆಯು ಸೆಪ್ಟೆಂಬರ್‌ನಿಂದಲೇ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಿತ್ತು.

ಬಹುತೇಕ ಬಳಕೆದಾರರು ಇದನ್ನು ಸ್ವಾಗತಿಸುವ ಜತೆಗೆ ಪ್ರಕಟಿಸಿದ ಟ್ವೀಟ್‌ ತಿದ್ದುಪಡಿ ಮಾಡಲು ಎಡಿಟ್‌ ಮಾಡುವ ಆಯ್ಕೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಜಗತ್ತಿನಾದ್ಯಂತ 330 ದಶಲಕ್ಷ ಸಕ್ರಿಯ ಟ್ವಿಟರ್‌ ಬಳಕೆದಾರರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry