ಶಿಮ್ಲಾ: ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದ ವಿಧಾನಸಭೆಗೆ ಗುರುವಾರ ಮತದಾನ ನಡೆಯಲಿದೆ. ಎಲ್ಲ 68 ಕ್ಷೇತ್ರಗಳಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಣಾಹಣಿ ಇದೆ. 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 62 ಶಾಸಕರು ಪುನರಾಯ್ಕೆ ಬಯಸಿದ್ದಾರೆ.

ಬಿಎಸ್‌ಪಿ 42, ಸಿಪಿಎಂ 14 ಮತ್ತು ಸ್ವಾಭಿಮಾನ ಪಾರ್ಟಿ ಮತ್ತು ಎಲ್‌ಜಿಪಿ ತಲಾ ಆರು ಮತ್ತು ಸಿಪಿಐ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

ಝಂದುತಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರೆ ಧರ್ಮಶಾಲಾದಲ್ಲಿ ಗರಿಷ್ಠ 12 ಅಭ್ಯರ್ಥಿಗಳಿದ್ದಾರೆ. 12 ದಿನಗಳ ಕಾಲ ಅಬ್ಬರದ ಪ್ರಚಾರ ನಡೆದಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 450 ರ‍್ಯಾಲಿಗಳನ್ನು ಸಂಘಟಿಸಿದ್ದವು.

ಪ್ರಧಾನಿ ನರೇಂದ್ರ ಮೋದಿ ಅವರು ಏಳು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಆರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೂರು ಸಮಾವೇಶಗಳಲ್ಲಿ ಮಾತನಾಡಿದ್ದರು.

ಯಾವುದೇ ಪಕ್ಷದ ಸರ್ಕಾರ ಸತತ ಎರಡು ಬಾರಿ ಇಲ್ಲಿ ಅಧಿಕಾರಕ್ಕೆ ಏರಿಲ್ಲ. ಹಾಗಿದ್ದರೂ, ಆರು ಬಾರಿ ಮುಖ್ಯಮಂತ್ರಿಯಾಗಿರುವ 85ರ ವೀರಭದ್ರ ಸಿಂಗ್ ಅವರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಚುನಾವಣಾ ಪ್ರಚಾರದ ಮಧ್ಯದಲ್ಲಿ ಪ್ರೇಮಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿತು. ಇದು ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಮತ ವಿವರ

ಒಟ್ಟು ಕ್ಷೇತ್ರಗಳು 68

ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು 337

ರಾಜ್ಯದಲ್ಲಿರುವ ಒಟ್ಟು ಮತದಾರರು 50.25 ಲಕ್ಷ

ಮತಎಣಿಕೆ ದಿನಾಂಕ ಡಿ. 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.