ಗುರುವಾರ , ಫೆಬ್ರವರಿ 25, 2021
29 °C

ತರಗತಿಯಲ್ಲಿ ಮುಖದ ಮಸಾಜ್‌; ಪ್ರಾಂಶುಪಾಲೆ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರಗತಿಯಲ್ಲಿ ಮುಖದ ಮಸಾಜ್‌; ಪ್ರಾಂಶುಪಾಲೆ ಅಮಾನತು

ಗೋರಖಪುರ: ಶಾಲಾ ಅವಧಿಯಲ್ಲಿ ತರಗತಿಯೊಳಗೆ ಮುಖಕ್ಕೆ ಮಸಾಜ್‌ ಮಾಡಿಸಿಕೊಂಡ ಪ್ರಾಂಶುಪಾಲೆಯೊಬ್ಬರನ್ನು ಅಮಾನತು ಮಾಡಿದ ಘಟನೆ ವರದಿಯಾಗಿದೆ.

ಶಾಲೆಯ ಪಕ್ಕದಲ್ಲಿಯೇ ಇದ್ದ ಬ್ಯೂಟಿ ಪಾರ್ಲರ್‌ ನ ಸಿಬ್ಬಂದಿಯೊಬ್ಬರನ್ನು ತರಗತಿಯೊಳಗೆ ಕರೆಸಿಕೊಂಡ ಪ್ರಾಂಶುಪಾಲೆ ಮುಖಕ್ಕೆ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೈದಾನದಲ್ಲಿ ಆಟವಾಡತ್ತಿದ್ದರು. ಪ್ರಾಂಶುಪಾಲೆ ಮಸಾಜ್‌ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಅದೇ ಶಾಲೆಯ ವಿದ್ಯಾರ್ಥಿಯ ಪೋಷಕರೊಬ್ಬರು ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದರು. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್‌ ಆಗಿದೆ.

ಪ್ರಾಂಶುಪಾಲೆಯನ್ನು ಅಮಾನತು ಮಾಡಿ, ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

‘ಶಿವಪುರ ಸಹಬ್‌ ಗಂಜ್‌ನ ಶಾಲೆಯ ಬಳಿ ಹೋಗುತ್ತಿದ್ದಾಗ ಮಕ್ಕಳು ತರಗತಿಯ ಹೊರಗೆ ಆಟವಾಡುತ್ತಿರುವುದು ಕಂಡು ಬಂತು. ಅದು ತರಗತಿ ನಡೆಯುವ ಅವಧಿಯಾಗಿತ್ತು. ನಾನು ಶಾಲೆಯ ಒಳಗೆ ಹೋದಾಗ  ಪ್ರಾಂಶುಪಾಲೆ ಮುಖದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದರೆ, ತಮಗೆ ಕೆಲಸ ಇರಲಿಲ್ಲ. ವಿರಾಮದ ಸಮಯ ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಮಸಾಜ್‌ ಮಾಡಿಸಿಕೊಂಡೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ’ ಎಂದು ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ಹೇಳಿದ್ದಾನೆ.

ಉತ್ತರ ಪ್ರದೇಶದ ಕೆಲವು ಶಾಲೆಗಳಲ್ಲಿ ಇಂಥ ‍ಪ್ರಕರಣಗಳು ಈ ಮೊದಲೂ ನಡೆದಿತ್ತು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಯ ಆವರಣಗೊಳಗೆ ಮದ್ಯದ ಪಾರ್ಟಿ, ಮದುವೆ ಸಮಾರಂಭಗಳನ್ನು ನಡೆಸಿರುವುದು ವರದಿಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.