ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬಳಿದ ಭಗವಂತ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

-ಕಿಗ್ಗಾಲು ಎಸ್ ಗಿರೀಶ್, ಮೂರ್ನಾಡು

**

ಪಡುವಣದಂಚಲಿ ನೇಸರ ಮುಳುಗಲು

ಭೂಮಿಗೆ ಇಳಿದನು ಭಗವಂತ

ಬಣ್ಣದ ಕುಂಚದ ಪೆಟ್ಟಿಗೆ ಹಿಡಿದು

ಬನದೊಳು ನುಸುಳಿದ ಆ ಸಂತ ||1||

ಇರಿಸಿದ ಕುಂಚದ ಪೆಟ್ಟಿಗೆಯೊಳಗಡೆ

ಸಾವಿರ ಬಣ್ಣದ ಹೊಸಡಬ್ಬ

ಹಚ್ಚಲು ಪ್ರತಿ ಸುಮಲತೆಗಳಿಗೆ

ಆಯಿತು ಕಣ್‍ಗಳಿಗದು ಹಬ್ಬ ||2||

ಸಾವಿರ ವಿಧದ ತರುಲತೆಗಳಿಗೆ

ಹಚ್ಚಲು ತೆಗೆದನು ಆ ಕುಂಚ

ಕುಂಚವ ಪಿಡಿದು ಮೆಲ್ಲಗೆ ಬಳಿದ

ಪ್ರತಿಸುಮಗಳಿಗೂ ಅತಿಕೊಂಚ ||3||

ಬಣ್ಣದ ಡಬ್ಬಿಗೆ ಕುಂಚವನದ್ದುತ

ಪ್ರತಿ ಕುಸುಮದ ಬಳಿ ಸರಿದು

ಹೂಗಳ ಪಕಳೆಯ ಪಿಡಿಯುತ ಮೆಲ್ಲನೆ

ಹಚ್ಚಿದ ಬಣ್ಣವನವ ಸುರಿದು ||4||

ಕೆಂಪು ಗುಲಾಬಿಗೆ, ಅರಿಸಿನ ಡೇರೆಗೆ

ಬಳಿದನು ಬಣ್ಣವ ಮುದದಿಂದ

ದಾಸವಾಳದ ಶಲಾಕಾಗ್ರವೂ

ಆಯಿತು ನೋಡಲು ಬಲು ಅಂದ! ||5||

ಜಾಜಿ, ಸಂಪಿಗೆ, ಝೀನಿಯಾ ಮಲ್ಲಿಗೆ

ಎಲ್ಲವು ಪಡೆದವು ಹೊಸಬಣ್ಣ

ಹಚ್ಚುತ ಹೀಗೆಯೆ ಪ್ರತಿ ಸುಮಗಳಿಗೆ

ಆಯಿತು ಕುಂಚವು ಬಲುಸಣ್ಣ! ||5||

ಆಗಲೆ ದೂರದಿ ಚೋಮನ ಕೋಳಿಯು

ಕೂಗುತ ತಿಳಿಸಿತು ಬೆಳಗಾಯ್ತು

ಕೋಳಿಯ ಕೂಗಿಗೆ ಬೆಚ್ಚಿದ ದೇವನು

ಗಡಿಬಿಡಿಯಲಿ ಸ್ವರ್ಗಕೆ ಹೊರಟಾಯ್ತು! ||6||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT