ಮೋದಿಯನ್ನು ಟೀಕಿಸಿ, ಅಗೌರವ ತೋರಬೇಡಿ: ರಾಹುಲ್ ಗಾಂಧಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ. ಆದರೆ, ಅಗೌರವ ತೋರಬೇಡಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಚುನಾವಣಾ ಪ್ರಚಾರ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರ ತಪ್ಪುಗಳನ್ನು ಎತ್ತಿತೋರಿಸಬಹುದು, ಬಿಜೆಪಿಗೆ ಮುಜುಗರ ಉಂಟುಮಾಡಬಹುದು. ಆದರೆ, ಪ್ರಧಾನಿಯ ಹುದ್ದೆಗೆ ನಾವು ಅಗೌರವ ತೋರಬಾರದು ಎಂದು ಹೇಳಿದರು.
‘ಮೋದಿ ಅವರು ವಿರೋಧ ಪಕ್ಷದಲ್ಲಿದ್ದಾಗ ಆಗಿನ ಪ್ರಧಾನಿಗೆ ಅಗೌರವ ತೋರಿ ಮಾತನಾಡುತ್ತಿದ್ದರು. ಇದು ಅವರಿಗೆ ಮತ್ತು ನಮಗಿರುವ ವ್ಯತ್ಯಾಸ. ನಮ್ಮ ಬಗ್ಗೆ ಮೋದಿ ಏನೇ ಹೇಳಲಿ. ಅವರು ಪ್ರಧಾನಿಯಾದ್ದರಿಂದ, ನಿರ್ದಿಷ್ಟ ಮಿತಿ ದಾಟಿ ನಾವು ಮಾತನಾಡಬಾರದು’ ಎಂದು ರಾಹುಲ್ ಹೇಳಿದರು. ಯುಪಿಎ ಸರ್ಕಾರದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಮೋದಿ ಟೀಕಿಸಿದ್ದನ್ನು ಉಲ್ಲೇಖಿಸಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
‘ಕಾಂಗ್ರೆಸ್ ಸತ್ಯವನ್ನೇ ಹೇಳುತ್ತದೆ. ಆ ಸತ್ಯವೇನೆಂದರೆ, ಗುಜರಾತ್‌ನ ಅಭಿವೃದ್ಧಿ ಹುಚ್ಚುತನದಿಂದ ಕೂಡಿದ್ದು’ ಎಂದು ಅಲ್ಲಿನ ಬಿಜೆಪಿ ಸರ್ಕಾರವನ್ನು ರಾಹುಲ್ ಟೀಕಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.