ಸೋಮವಾರ, ಮಾರ್ಚ್ 1, 2021
29 °C

ಅಲ್ಲು ಕೇಶಾವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲು ಕೇಶಾವತಾರ

ಬೆಂಗಳೂರು: ‘ನಾ ಪೇರು ಸೂರ್ಯ’ ತೆಲುಗು ಸಿನಿಮಾದಲ್ಲಿ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಲ್ಲು ಅರ್ಜುನ್‌ ಅವರ ‘ಆರ್ಮಿ ಕಟ್‌’ ಕೇಶಶೈಲಿ ಈಗ ಸುದ್ದಿಯಲ್ಲಿದೆ. ಮೊನ್ನೆ ತಾನೇ ನಡೆದ ನಾಗಚೈತನ್ಯ–ಸಮಂತಾ ಮದುವೆ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಲ್ಲು ಅರ್ಜುನ್‌  ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿವೆ. ಅಲ್ಲು ಅವರ ಕೇಶ ಶೈಲಿ ಇದಕ್ಕೆ ಕಾರಣ.

‘ನಾ ಪೇರು ಸೂರ್ಯ’, ಸೇನೆ ಮತ್ತು ಯುದ್ಧದ ಕತೆಯನ್ನೊಳಗೊಂಡಿರುವ ಚಿತ್ರ. ಯುದ್ಧದ ಸನ್ನಿವೇಶಗಳಲ್ಲಿಯೂ ಅಲ್ಲು ಅರ್ಜುನ್‌ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಇಂತಹ ಸಿನಿಮಾಗಳು ಬಂದಿದ್ದರೂ ಅಲ್ಲು ಅರ್ಜುನ್‌ ಮಾತ್ರ ತಮ್ಮ ಪಾತ್ರ ವಾಸ್ತವಕ್ಕೆ ಹತ್ತಿರವಾಗಿರಬೇಕು ಎಂಬ ಉದ್ದೇಶದಿಂದ ಕೇಶ ವಿನ್ಯಾಸದಂತಹ ಸೂಕ್ಷ್ಮ ವಿವರಗಳಿಗೆ ಆದ್ಯತೆ ನೀಡಿದ್ದಾರಂತೆ.

ಎರಡೂ ಕಿವಿಗಳಿಂದ ಮೇಲೆ ಕೂದಲನ್ನು ಸಪಾಟಾಗಿ ಕತ್ತರಿಸಿ, ನೆತ್ತಿಯಲ್ಲಿ ಒಂದಿಂಚು ಉದ್ದಕ್ಕೆ ಕೂದಲನ್ನು ಶಿಸ್ತಿನ ಸಿಪಾಯಿಗಳ ಕೇಶ ಮಾದರಿಯಲ್ಲಿಯೇ ಕತ್ತರಿಸಲಾಗಿದೆ. ವಕ್ಕಂಟಮ್‌ ವಂಶಿ ನಿರ್ದೇಶನದ ‘ನಾ ಪೇರು ಸೂರ್ಯ’ ಚಿತ್ರಕ್ಕೆ ಬಾಲಿವುಡ್‌ ಸಂಗೀತ ನಿರ್ದೇಶಕರಾದ ವಿಶಾಲ್‌– ಶೇಖರ್‌ ಅವರ ಸಂಗೀತವಿದೆ. ಅಲ್ಲು ಅರ್ಜುನ್‌ ಪ್ರೇಮಿಗಳಿಗೆ ‘ನಾ ಪೇರು...’ ಭರ್ಜರಿ ಮನರಂಜನೆಯೂ ಈ ಚಿತ್ರದಲ್ಲಿರುತ್ತದೆ ಎಂದು ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.