ಮೊಬೈಲ್–ಆಧಾರ್ ಜೋಡಣೆ: ಫೆ.6 ಕೊನೆಯ ದಿನ

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು 2018ರ ಫೆಬ್ರುವರಿ 6 ಕಡೆಯ ದಿನ ಎಂದು ಗ್ರಾಹಕರೊಂದಿಗೆ ನಡೆಸುವ ಸಂವಹನದಲ್ಲಿ (ಎಸ್‌ಎಂಎಸ್, ಇಂಟರಾಕ್ಟಿವ್ ವಾಯ್ಸ್ ಕಾಲ್) ಉಲ್ಲೇಖಿಸುವಂತೆ ಎಲ್ಲ ದೂರ ಸಂಪರ್ಕ ಸೇವಾ ಕಂಪೆನಿಗಳಿಗೆ ಕೇಂದ್ರ ದೂರ ಸಂಪರ್ಕ ಸಚಿವಾಲಯ ಸೋಮವಾರ ಸೂಚಿಸಿದೆ.
ಬ್ಯಾಂಕ್ ಖಾತೆಗಳು ಅಥವಾ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆ ಮಾಡುವ ಕೊನೆಯ ದಿನ ಯಾವುದು ಎಂಬ ಮಾಹಿತಿಯನ್ನು ಗ್ರಾಹಕರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಚಿವಾಲಯಕ್ಕೆ ನಿರ್ದೇಶಿಸಿತ್ತು. ಇದರ ಆಧಾರದಲ್ಲಿ ಸೋಮವಾರ ಅಧಿಸೂಚನೆ ಹೊರಡಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.