ಸೋಮವಾರ, ಮಾರ್ಚ್ 1, 2021
31 °C

ಪ್ರಿಯಾಂಕಾ ನನಗಿಷ್ಟ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಪ್ರಿಯಾಂಕಾ ನನಗಿಷ್ಟ

* ನೀವು ಆಭರಣ ಪ್ರಿಯರೇ?

ನನಗೆ ಚಿನ್ನದ ಆಭರಣಗಳಿಗಿಂತ ವಜ್ರಾಭರಣಗಳೆಂದರೆ ಇಷ್ಟ. ಆಭರಣಗಳ ವಿಷಯದಲ್ಲಿ ತುಂಬಾ ಚ್ಯೂಸಿ. ಟ್ರೆಂಡ್‌ಗೆ ತಕ್ಕಂತೆ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಹಗುರವಾಗಿ, ನೋಡಲು ಆಕರ್ಷಕವಾಗಿರುವ ವಜ್ರದ ಬ್ರೆಸ್‌ಲೆಟ್‌, ಸ್ಟಡ್ಸ್‌ಗಳ ಸಂಗ್ರಹ ನನ್ನ ಬಳಿ ಇವೆ.

* ಇಲ್ಲಿಯ ಸಂಗ್ರಹಗಳು ಹೇಗೆನ್ನಿಸಿತು?

ಅದ್ಭುತವಾಗಿದೆ. ನವೀನ ವಿನ್ಯಾಸದ ಮದುವೆ ಹಾಗೂ ವಿಶೇಷ ಸಂದರ್ಭಗಳಿಗೆ ಹೊಂದುವ ಆಭರಣಗಳು ಇಲ್ಲಿವೆ. ಈ ಸಂಗ್ರಹಗಳು ಯಾವುದೇ ರೀತಿಯ ಬಟ್ಟೆಗಳಿಗೂ ಒಪ್ಪುತ್ತವೆ.

* ನಟನೆಯಲ್ಲಿ ಆಸಕ್ತಿ ಬಂದಿದ್ದು ಹೇಗೆ?

ನಾನು ಮುಂಬೈಗೆ ಬಂದಾಗ ನನಗೆ 19 ವರ್ಷ. ಆಗ ನಟನೆಯ ಬಗ್ಗೆ ಎಳ್ಳಷ್ಟು ಜ್ಞಾನವಿರಲಿಲ್ಲ. ಮಾಡೆಲಿಂಗ್‌ನಲ್ಲಿ ಅವಕಾಶ ದೊರಕಿತು. ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಕ್ಕಿಂತ ಜಾಹಿರಾತುಗಳಲ್ಲಿ ಕಾಣಿಸಿದ್ದೆ ಹೆಚ್ಚು. ನನ್ನದು ನಾಚಿಕೆ ಸ್ವಭಾವ. ಆದರೆ ಜಾಹಿರಾತಿಗೆ ಆಡಿಷನ್‌ ಕೊಡುವಾಗ ಭಯವಾಗುತ್ತಿರಲಿಲ್ಲ. ಕ್ಯಾಮೆರಾ ಮುಂದೆ ನಿಲ್ಲುವುದೇ ಖುಷಿ ಎನಿಸುತ್ತಿತ್ತು. ಕ್ಯಾಮೆರಾ ಪ್ರೀತಿಯೇ ನಟನಾಸಕ್ತಿ ಬೆಳೆಸಿತು.

* ‘ಕುಂಗ್‌ ಫು ಯೋಗ’ದ ಅನುಭವ ಹೇಗಿತ್ತು?

ಅದೊಂದು ಅದ್ಭುತ ಅನುಭವ. ಜಾಕಿಚಾನ್‌ ಅವರನ್ನು ನೋಡಿದಾಗ ನನ್ನ ಕನಸು ನನಸಾದಷ್ಟು ಸಂತಸವಾಗಿತ್ತು. ಅವರೊಂದಿಗೆ ತೆರೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೆ. ಚಿತ್ರೀಕರಣದ ಸ್ಥಳದಲ್ಲಿ ಪ್ರತಿಯೊಬ್ಬರಿಗೂ ಚಾಕೊಲೆಟ್‌, ಕೇಕ್‌, ಐಸ್‌ಕ್ರೀಮ್ ತಂದುಕೊಡುತ್ತಿದ್ದರು. ಲೈಟ್‌ಬಾಯನ್ನು ಅವರು ಮರೆಯುತ್ತಿರಲಿಲ್ಲ. ಎಲ್ಲರಿಗೂ ತಿನಿಸುವುದೆಂದರೆ ಅವರಿಗೆ ತುಂಬಾ ಇಷ್ಟ. ಜೊತೆಗೆ ಶ್ರಮಜೀವಿ. ಈ ಸಿನಿಮಾ ಮಾಡುತ್ತಲೇ ಮತ್ತೇರಡು ಸಿನಿಮಾವನ್ನು ಅವರು ಮುಗಿಸಿದ್ದರು. ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಹಲವು ಪಾಠಗಳನ್ನು ಅವರಿಂದ ಕಲಿತಿದ್ದೇನೆ.

* ಸಿನಿಮಾ, ಮಾಡೆಲಿಂಗ್‌ನಲ್ಲಿ ಯಾವುದು ನಿಮಗಿಷ್ಟ?

ಎರಡೂ ಇಷ್ಟ. ಎರಡಕ್ಕೂ ಸಾಕಷ್ಟು ಹೋಲಿಕೆಯಿದೆ. ಆದರೆ ಮಾಡೆಲಿಂಗ್‌ನಲ್ಲಿ ಏಕತಾನತೆ ಇರುತ್ತದೆ. ಸಿನಿಮಾ ಹಾಗಲ್ಲ. ಇಲ್ಲಿ ವಿಭಿನ್ನ ಪಾತ್ರಗಳು ಪ್ರತಿಭೆ ಅನಾವರಣಕ್ಕೆ ನೆರವಾಗುತ್ತದೆ.

* ಇಷ್ಟದ ಆಹಾರ ಚೈನೀಸ್‌ ಫುಡ್‌ ನಟನೆಯ ಹೊರತಾದ ಹವ್ಯಾಸ..

ಬಾಸ್ಕೆಟ್‌ಬಾಲ್‌, ಜಿಮ್ನಾಸ್ಟಿಕ್‌, ಓದುವುದು.

* ಬೆಂಗಳೂರು ಹೇಗೆನಿಸಿತು?

ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಹಾಗಾಗಿ ಹೆಚ್ಚು ಸ್ಥಳವನ್ನು ನೋಡಲು ಸಾಧ್ಯವಾಗಿಲ್ಲ. ಇಲ್ಲಿಯ ವಾತಾವರಣ ಚೆನ್ನಾಗಿದೆ.

*ನಿಮ್ಮ ಸೌಂದರ್ಯದ ಗುಟ್ಟು..

ನನ್ನನ್ನು ಇಷ್ಟು ಸುಂದರವಾಗಿ ಕಾಣುವಂತೆ ಮಾಡಿರುವ ನನ್ನ ಪ್ರಸಾಧನ ಕಲಾವಿದರು.

* ನಿಮಗೆ ಯಾರು ಮಾದರಿ

ಪ್ರಿಯಾಂಕಾ ಚೋಪ್ರಾ. ಅವರ ಆತ್ಮವಿಶ್ವಾಸ, ಧೈರ್ಯ, ನಟನೆ ಎಲ್ಲವೂ ನನಗಿಷ್ಟ.

* ಟ್ರೋಲ್ಸ್‌ಗಳಿಗೆ ನಿಮ್ಮ ಪ್ರತಿಕ್ರಿಯೆ?

ಅವು ನನ್ನ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ.

* ಕನ್ನಡದಲ್ಲಿ ಅವಕಾಶ ಸಿಕ್ಕರೆ...

ಒಳ್ಳೆಯ ಕಥೆ ಇದ್ದರೆ ನಟಿಸುತ್ತೇನೆ.

* ಮುಂದಿನ ಸಿನಿಮಾ?

‘ಭಾಗಿ– 2’ ಚಿತ್ರೀಕರಣ ನಡೆಯುತ್ತಿದೆ.

* ಸ್ಟೈಲ್‌ ಎಂದರೇನು?

ಸ್ಟೈಲ್‌ ಎನ್ನುವುದು ಸಂದರ್ಭಗಳಿಗೆ ಅನುಗುಣವಾಗಿರುತ್ತದೆ. ಸರಳವಾಗಿದ್ದರೂ, ಸುಂದರವಾಗಿ ಕಾಣುವ ಕೌಶಲವಿರಬೇಕು. ಜ್ಯುವೆಲರಿ ವಿಷಯಕ್ಕೆ ಬಂದರೆ ವಜ್ರದ ಆಭರಣಗಳು ಸ್ಟೈಲಿಶ್ ಆಗಿ ಕಾಣುತ್ತದೆ.

ನಿಮ್ಮ ಫಿಟ್‌ನೆಸ್‌ ಮಂತ್ರ..

ಆರೋಗ್ಯಕರ ತಿನಿಸು, ವರ್ಕೌಟ್‌. ಜಂಕ್‌ಫುಡ್‌ಗಳಿಂದ ದೂರವೇ ಇರುತ್ತೇನೆ. ಕರಿದ ಪದಾರ್ಥಗಳು ಆರೋಗ್ಯವನ್ನು ಹಾಳುಮಾಡುವ ಜೊತೆಗೆ ಚರ್ಮದ ಸೌಂದರ್ಯವನ್ನು ಕೆಡಿಸುತ್ತದೆ. ಇಂತಹ ಆಹಾರಗಳಿಂದ ದೂರವಿರಿ. ನಿಮ್ಮ ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳುವಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.