7

ಕೊಡಗಿನಲ್ಲಿ ಡಿ.3ರಂದು ಹುತ್ತರಿ ಹಬ್ಬ

Published:
Updated:

ನಾಪೋಕ್ಲು: ಪ್ರಸಕ್ತ ವರ್ಷ ಡಿಸೆಂಬರ್‌ 3ರಂದು ಕೊಡಗಿನಲ್ಲಿ ಸುಗ್ಗಿಹಬ್ಬ ಹುತ್ತರಿಯನ್ನು ಆಚರಿಸಲು ನಿರ್ಧರಿಸಲಾಗಿದೆ. ಕೊಡಗಿನ ಕುಲದೈವ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಶನಿವಾರ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ, ಶುಭ ಘಳಿಗೆಯನ್ನು ದೇವಾಲಯದ ಪಾರಂಪರಿಕ ಜೋತಿಷಿ ಅಮ್ಮಂಗೇರಿ ಕಣಿಯರ ಶಶಿಕುಮಾರ್ ನಿಗದಿಪಡಿಸಿದರು.

ಡಿಸೆಂಬರ್‌ 2ರಂದು ಶನಿವಾರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಕಲಾಡ್ಚ ಹಬ್ಬವನ್ನು , 3ರಂದು ಸಂಜೆ 7 ಗಂಟೆಗೆ ದೇವಾಲಯದಲ್ಲಿ ನೆರೆ ಕಟ್ಟುವುದು. 8ಗಂಟೆಗೆ ಕದಿರು ತೆಗೆಯುವುದು ಮತ್ತು 9 ಗಂಟೆಗೆ ಪ್ರಸಾದ ಭೋಜನಕ್ಕೆ ಪ್ರಶಸ್ತ ಸಮಯವೆಂದು ನಿಗದಿಪಡಿಸಲಾಯಿತು. ಸಾರ್ವಜನಿಕರಿಗೆ ಸಂಜೆ 7.30 ಗಂಟೆಗೆ ನೆರೆ ಕಟ್ಟುವುದು, 8.30ಗಂಟೆಗೆ ಕದಿರು ತೆಗೆಯುವುದು ಮತ್ತು 9.30ಗಂಟೆಗೆ ಭೋಜನಕ್ಕೆ ಸಮಯ ನಿಗದಿಪಡಿಸಲಾಗಿದೆ.

ದೇವತಕ್ಕರಾದ ಪರದಂಡ ಚಂಗಪ್ಪ, ಭಕ್ತಜನ ಸಂಘದ ಉಪಾ ಧ್ಯಕ್ಷ ಪರದಂಡ ಡಾಲಿ, ಖಜಾಂಚಿ ನಂಬಡಮಂಡ ಸುಬ್ರಮಣಿ, ನಿರ್ದೇಶಕ ಪಾಂಡಂಡ ನರೇಶ್, ತಕ್ಕ ಮುಖ್ಯಸ್ಥರಾದ ನಂಬಡಮಂಡ ಮಂದಣ್ಣ, ಪರದಂಡ ಅಪ್ಪಣ್ಣ, ನಾಚಪ್ಪ, ರಾಜಪ್ಪ, ಕೇಟೋಳಿರ ಕುಟ್ಟಪ್ಪ, ಪೇರಿ ಯಂಡ ಪೂವಯ್ಯ, ಸುಬ್ರಮಣಿ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಲಿಯಂಡ ಸಿ.ನಾಣಯ್ಯ, ಕಣಿಯರ ನಾಣಯ್ಯ, ಹರೀಶ್, ಕುಲ್ಲೇಟಿರ ದೇವಿ ದೇವಯ್ಯ, ಕೇಲೇಟ್ಟಿರ ಮನು, ಡಾ.ಬೋಪಣ್ಣ, ಪಾರುಪತ್ತೆಗಾರ ಪರದಂಡ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ ಸೇರಿದಂತೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry