4

ಅಪಾಯಕ್ಕೆ ಆಹ್ವಾನ

Published:
Updated:

ಕೊಳ್ಳೇಗಾಲ: ಡಾ.ರಾಜಕುಮಾರ್ ರಸ್ತೆಯ ರವಿ ಮೆಡಿಕಲ್ಸ್ ಮುಂಭಾಗ ಮ್ಯಾನ್‌ಹೋಲ್‌ನ ಮುಚ್ಚಳದಲ್ಲಿರುವ ಕಬ್ಬಿಣದ ಪಟ್ಟಿ ಕಿತ್ತು ಮೇಲೆ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ನಗರದ ಮುಖ್ಯಭಾಗದಲ್ಲಿರುವ ಈ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ ಇರುತ್ತದೆ. ವಾಹನ ಸವಾರರು ಕಣ್ತಪ್ಪಿನಿಂದ ಮ್ಯಾನ್‌ಹೋಲ್‌ ಮೇಲೆ ಹತ್ತಿಸಿದರೆ ಪಟ್ಟಿ ಟೈರ್‌ ಒಳಹೊಕ್ಕು ಅಪಘಾತ ಸಂಭವಿಸುವ ಅಪಾಯವಿದೆ.

ಇತ್ತೀಚೆಗಷ್ಟೇ ಟೈರ್‌ಗೆ ಪಟ್ಟಿ ಹೊಕ್ಕಿದ್ದರಿಂದ ಬೈಕ್‌ನಿಂದ ಬಿದ್ದು ಯುವಕನೊಬ್ಬನಿಗೆ ಗಾಯವಾಗಿತ್ತು. ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry