7

ಪಂಚನಹಳ್ಳಿಯಲ್ಲಿ ಆರೋಗ್ಯ ಉಚಿತ ಶಿಬಿರ

Published:
Updated:
ಪಂಚನಹಳ್ಳಿಯಲ್ಲಿ ಆರೋಗ್ಯ ಉಚಿತ ಶಿಬಿರ

ಕಡೂರು: ಪ್ರತಿ ಹೋಬಳಿಯಲ್ಲೂ ಆರೋಗ್ಯ ಉಚಿತ ಶಿಬಿರ ಏರ್ಪಡಿಸುವ ಮೂಲಕ ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಯಲ್ಲಿ ಗಿರೀಶ್ ಉಪ್ಪಾರ್ ಚಾರಿಟಬಲ್ ಟ್ರಸ್ಟ್ ಸೇವಾ ಕೈಂಕರ್ಯ ಸಲ್ಲಿಸುತ್ತಿದೆಎಂದು ಟ್ರಸ್ಟ್ ಅಧ್ಯಕ್ಷ ಜಿ.ಕೆ. ಗಿರೀಶ್ ಉಪ್ಪಾರ್ ತಿಳಿಸಿದರು.

ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಸೋಮವಾರ ನಡೆದ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಗಟಿ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಅಗತ್ಯವೆನಿಸಿದ 8 ಜನರಿಗೆ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಪೂರ್ಣ ವೆಚ್ಚವನ್ನು ಟ್ರಸ್ಟ್ ಭರಿಸಿದೆ ಎಂದರು.

ಶಿಬಿರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದಾರೆ. ಹೃದಯ, ಕಿಡ್ನಿ ಮತ್ತು ನರರೋಗ ತಪಾಸಣೆಗೆ ಹೆಚ್ಚಿನ ಜನರು ಬಂದಿದ್ದು, ಸುಮಾರು 30 ಕ್ಕೂ ಹೆಚ್ಚಿನವರಿಗೆ ಉನ್ನತ ಚಿಕಿತ್ಸೆಯ ಅಗತ್ಯವಿದ್ದು, ಬೆಂಗಳೂರಿನಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಮಸ್ಯೆಗಳು ಬಹುತೇಕ ಅಶುದ್ಧ ನೀರಿನಿಂದ ಬರುತ್ತದೆ. ಅದನ್ನು ಮನಗಂಡು ಟ್ರಸ್ಟ್ ಮೂಲಕ 25ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಟ್ರಸ್ಟ್ ಮೂಲಕ ಗ್ರಾಮೀಣ ಭಾಗಗಳಲ್ಲಿ ಅಗತ್ಯ ಸೌಲಭ್ಯವನ್ನು ಇತಿಮಿತಿಯಲ್ಲಿ ಒದಗಿಸಲು ಬದ್ದವಾಗಿದೆ ಎಂದರು.

ಪ್ರತಿ ಭಾನುವಾರ ಒಂದೊಂದು ಹೋಬಳಿಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯವನ್ನು ನಡೆಸಲು ಟ್ರಸ್ಟ್ ಉದ್ದೇಶಿಸಿದ್ದು, ಹಿರೇನಲ್ಲೂರು, ಅಂತರಘಟ್ಟೆ, ಚೌಳಹಿರಿಯೂರುಗಳಲ್ಲಿ ಆರೋಗ್ಯ ಶಿಬಿರವನ್ನು ತಜ್ಞ ವೈದ್ಯರಿಂದ ನಡೆಸಲಾಗುವುದು ಗ್ರಾಮೀಣ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು  ಮನವಿ ಮಾಡಿದರು.

ಬೆಂಗಳೂರಿನ ವೈದ್ಯರಾದ ಡಾ.ರಾಮನಾಯಕ,ಡಾ.ಹನುಮಂತ್,ಡಾ.ಅದೀಶ್, ವಸಂತಕುಮಾರ್,  ಪ್ರಭುಕುಮಾರ್, ವಿನಯ್‌ಕುಮಾರ್‌, ಬಿ.ಪಿ.ಕ್ರೊಟ್ರೇಶ್, ಗಂಗಾಧರ, ಪಂಚನಹಳ್ಳಿ ಗ್ರಾಮದ ಹಿರಿಯ ಮುಖಂಡ ಪಾಪಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry