7

ಸುನಗ: ಸಾಹಸ ಸ್ಪರ್ಧೆಗಳ ರೋಮಾಂಚನ

Published:
Updated:
ಸುನಗ: ಸಾಹಸ ಸ್ಪರ್ಧೆಗಳ ರೋಮಾಂಚನ

ಬೀಳಗಿ: ತಾಲ್ಲೂಕಿನ ಸುನಗಾದಲ್ಲಿ ಗ್ರಾಮದೇವತೆ ಜಾತ್ರೆ ಅಂಗವಾಗಿ ನಡೆದ ಭಾರ ಎತ್ತುವ ಸ್ಪರ್ಧೆಗೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಕಟ್ಟಾಳುಗಳು ಸಾಹಸ ಪ್ರದರ್ಶನ ನೀಡಿ ನೆರೆದ ಸಾವಿರಾರು ಮಂದಿಯ ಚಪ್ಪಾಳೆಗೆ ಪಾತ್ರರಾದರು.

ಬಂಡಿಗಾಲಿನ ಮೇಲಿಂದ ಸುಮಾರು ಒಂದು ಕ್ವಿಂಟಲ್ 60 ಕೆ.ಜಿ ಕ್ಕಿಂತ ಹೆಚ್ಚಿನ ತೂಕ ಬೆನ್ನಿನ ಮೇಲೆ ಎತ್ತಿಕೊಂಡು ನಿಲ್ಲುವ ಶಕ್ತಿ ಪ್ರದರ್ಶನ ರೋಮಾಂಚನ ಮೂಡಿಸಿತು. ಇದೇ ವೇಳೆ ಓಟದ ತಾಕತ್ತು ಪ್ರದರ್ಶಿಸಿದ ಜೊಡಿ ಎತ್ತಿನ ಗಾಡಿಗಳ ರೇಸ್‌ ಜನಮೆಚ್ಚುಗೆಗೆ ಪಾತ್ರವಾಯಿತು. ಜಾತ್ರೆ ಅಂಗವಾಗಿ ಬ್ಯಾಕ್ ಹ್ಯಾಂಡಲ್, ಸೈಕಲ್ ರೇಸ್, ಟಗರಿನ ಕಾಳಗ, ತುಳಸಿಗೇರಿಯ ಕುವೆಂಪು ಸರ್ಕಾರಿ ಮಾದರಿ ಶಾಲೆಯ ಮಕ್ಕಳಿಂಬ ಮಲ್ಲಕಂಬ ಸೇರಿದಂತೆ ವಿವಿಧ ಸ್ಪರ್ಧೆಗಳು ಕಳೆಗಟ್ಟಿದವು.

ಬಂಡಿಗಾಲಿನ ಮೇಲಿನಿಂದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೇನಾಳದ ಯಮನಪ್ಪ ಮೇಟಿ ಪ್ರಥಮ, ರಾಮಣ್ಣ ತಿರ್ಲಾಪುರ ದ್ವಿತೀಯ, ಭಾರದ ಚೀಲ ಎತ್ತುವ ಸ್ಪರ್ಧೆಯಲ್ಲಿ ವಿಠ್ಠಲ ಜಗಲಿ ಪ್ರಥಮ ಸ್ಥಾನ, ಕೃಷ್ಣಾ ಪವಾರ್ ದ್ವಿತೀಯ, ಎತ್ತಿನ ಗಾಡಿಯ ರೇಸ್‌ನಲ್ಲಿ ಹೊಳೆ ಹಂಗರಗಿಯ ಎತ್ತುಗಳು ಪ್ರಥಮ, ಬೆಳಗಲಿಯ ಎತ್ತುಗಳು ದ್ವಿತಿಯ, ಸ್ಥಾನ ಪಡೆದವು.

ಗ್ರಾಮದ ಹಿರಿಯರಾದ ಪ್ರದೀಪ ನಾಯಿಕ, ಪ್ರಕಾಶ ಜಗ್ಗಲ, ಚಂದ್ರಶೇಖರ ಫಂಡರಿ, ಬಸು ಮೇಟಿ, ಹನಮಂತ ನಿಂಗಣ್ಣವರ, ಶ್ರೀಶೈಲ ಮೇಟಿ, ಕರಿಯಪ್ಪ ಬೂದಿಹಾಳ, ಯಲ್ಲಪ್ಪ ಲಗಮನಿ, ಮಲ್ಲಪ್ಪ ನಾಗರಾಳ, ಭೀಮಸಿ ಎರಡೆಮ್ಮಿ, ರುದ್ರಪ್ಪ ಆನಿಕೇರಿ ಸೇರಿದಂತೆ ಮುಖಂಡರು ಹಾಜರಿದ್ದು, ಸ್ಪರ್ಧೆಗಳು ಸರಾಗವಾಗಿ ನಡೆಯುವಂತೆ ಶ್ರಮವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry