7

ದೌರ್ಬಲ್ಯ: ಕಾರಣ ಹಲವು...

Published:
Updated:
ದೌರ್ಬಲ್ಯ: ಕಾರಣ ಹಲವು...

ಪುರುಷರಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಅತೃಪ್ತಿಗೆ ಅಥವಾ ದೌರ್ಬಲ್ಯಕ್ಕೆ ಹಲವು ಕಾರಣಗಳಿವೆ. ಇದು ಭಾವನಾತ್ಮಕ ಹಾಗೂ ದೈಹಿಕ – ಎರಡೂ ರೀತಿಯ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ಅಂಕಿ–ಅಂಶವೊಂದರ ಪ್ರಕಾರ, 40ರಿಂದ 70 ವಯಸ್ಸಿನ ನಡುವಿನ ಸುಮಾರು ಶೇ. 50ರಷ್ಟು ಪುರುಷರು ಒಂದಲ್ಲಾ ಒಂದು ಬಾರಿ ಲೈಂಗಿಕ ದೌರ್ಬಲ್ಯ ಸಮಸ್ಯೆಗೆ ಒಳಗಾಗಿರುತ್ತಾರೆ. ವಯಸ್ಸಿನೊಂದಿಗೆ ಈ ಸಮಸ್ಯೆಯ ಸಾಧ್ಯತೆಯೂ ಹೆಚ್ಚಾಗುತ್ತಿರುತ್ತದೆ. ಆದರೆ ಇದಕ್ಕೆ ನಿಖರ ಕಾರಣವೇನು ಎಂಬುದನ್ನು ಅರಿತುಕೊಂಡರೆ, ನಿವಾರಣೆಯ ಹಾದಿಯೂ ಗೋಚರಿಸುತ್ತದೆ.

ಎಂಡೊಕ್ರೈನ್ ಸಮಸ್ಯೆ: ದೇಹದಲ್ಲಿನ ಎಂಡೋಕ್ರೈನ್ ವ್ಯವಸ್ಥೆಯು ಮೆಟಬಾಲಿಸಂ, ಲೈಂಗಿಕ ಕ್ರಿಯೆ, ಸಂತಾನೋತ್ಪತ್ತಿ, ಭಾವನೆಗಳ ನಿಯಂತ್ರಿಸುವಿಕೆಗೆ ಕಾರಣವಾಗಿರುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

ಮಧುಮೇಹ ಈ ಎಂಡೋಕ್ರೈನ್ ಸಮಸ್ಯೆಗೆ ಉತ್ತಮ ಉದಾಹರಣೆ. ಇದು ಪುರುಷರಲ್ಲಿ ಲೈಂಗಿಕ ದೌರ್ಬಲ್ಯದ ಅನುಭವ ನೀಡುತ್ತದೆ. ಹಾರ್ಮೋನ್ ಇನ್ಸುಲಿನ್ ಅನ್ನು ಉಪಯೋಗಿಸಿಕೊಳ್ಳುವ ದೈಹಿಕ ಸಾಮರ್ಥ್ಯದ ಮೇಲೆ ಮಧುಮೇಹ ಪರಿಣಾಮ ಬೀರುತ್ತದೆ.

ದೀರ್ಘಕಾಲೀನ ಮಧುಮೇಹದಿಂದಾಗುವ ಪ್ರಮುಖ ಅಡ್ಡ ಪರಿಣಾಮ ಎಂದರೆ, ನರದ ಮೇಲುಂಟಾಗುವ ಹಾನಿ. ಇದು ಪುರುಷರ ಜನನೇಂದ್ರಿಯದ ಸಂವೇದನೆಯನ್ನು ಕಸಿದುಕೊಳ್ಳುತ್ತದೆ. ಮಧುಮೇಹದೊಂದಿಗೆ ಇರುವ ಮತ್ತೂ ಕೆಲವು ತೊಂದರೆಗಳೆಂದರೆ, ರಕ್ತಸಂಚಲನ ಹಾಗೂ ಹಾರ್ಮೋನಿನ ಮಟ್ಟದ ಮೇಲೆ ಪರಿಣಾಮ ಬೀರುವುದು. ಈ ಎರಡೂ ಅಂಶಗಳು ಲೈಂಗಿಕ ದೌರ್ಬಲ್ಯಕ್ಕೆ ಎಡೆಮಾಡಿಕೊಡುತ್ತವೆ.

ನರದೌರ್ಬಲ್ಯ: ನರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಲೈಂಗಿಕ ದೌರ್ಬಲ್ಯದ ಅಪಾಯವನ್ನೂ ಹೆಚ್ಚಿಸುತ್ತವೆ. ನರದ ಸಮಸ್ಯೆಯಿಂದಾಗಿ, ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಪರ್ಕ/ ಸಂವಹನ ಕಲ್ಪಿಸುವ ಮೆದುಳಿನ ಸಾಮರ್ಥ್ಯಕ್ಕೆ ತೊಡಕಾಗುವುದರಿಂದ ಪುರುಷರನ್ನು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯವಾಗದಂತೆ ತಡೆಯುತ್ತದೆ.

ಲೈಂಗಿಕ ಅಸಾಮರ್ಥ್ಯದೊಂದಿಗೆ ತಳುಕು ಹಾಕಿಕೊಂಡಿರುವ ಇನ್ನೂ ಕೆಲವು ನರಸಂಬಂಧಿ ಸಮಸ್ಯೆಗಳೆಂದರೆ: ಅಲ್ಜಮೈರ್, ಪಾರ್ಕಿನ್ಸನ್, ಮೆದುಳು ಅಥವಾ ಸ್ಪೈನಲ್ ಟ್ಯೂಮರ್, ಮಲ್ಟಿಪಲ್ ಸೆಲೆರೊಸಿಸ್, ಪಾರ್ಶ್ವವಾಯು, ಟೆಂಪೊರಲ್ ಲೋಬ್ ಎಪಿಲೆಪ್ಸಿ. ಪ್ರೋಸ್ಟೇಟ್ ಗ್ಲಾಂಡ್ ಶಸ್ತ್ರಚಿಕಿತ್ಸೆಯಾದ ವ್ಯಕ್ತಿಗೂ ನರದೌರ್ಬಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ.

ನಿರಂತರವಾಗಿ ಅತಿ ದೂರ ಬೈಸಿಕಲ್ ಓಡಿಸುವವರಿಗೂ ತಾತ್ಕಾಲಿಕವಾಗಿ ಈ ಸಮಸ್ಯೆ ಎದುರಾಗಬಹುದು. ಪೃಷ್ಠ, ಜನನೇಂದ್ರಿಯದ ಮೇಲಿನ ನಿರಂತರ ಒತ್ತಡದಿಂದ ನರದ ಕಾರ್ಯವೈಖರಿಯಲ್ಲಿ ಏರುಪೇರಾಗಬಹುದು.

ಔಷಧಗಳ ಸೇವನೆ: ಕೆಲವು ಔಷಧಗಳ ಸೇವನೆಯಿಂದ ರಕ್ತ ಸಂಚಲನೆಯಲ್ಲಿ ಬದಲಾವಣೆಯಾಗಿ ನಿಮಿರುವಿಕೆ ಸಮಸ್ಯೆ ಬರಬಹುದು. ಆದರೆ ವೈದ್ಯರ ಅನುಮತಿಯಿಲ್ಲದೇ ಔಷಧಸೇವನೆಯನ್ನು ಎಂದಿಗೂ ನಿಲ್ಲಿಸಬಾರದು.

ದೌರ್ಬಲ್ಯ ತರುವ ಕೆಲವು ಔಷಧಗಳೆಂದರೆ, ಆಲ್ಫಾ ಅಡ್ರೆನೆರ್ಜಿಕ್ ಬ್ಲಾಕರ್‌ಗಳಾದ ಟ್ಯಾಂಸುಲೋಸಿನ್, ಬೆಟಾ ಬ್ಲಾಕರ್‌ಗಳಾದ ಕಾರ್ವೆಡಿಲಾಲ್, ಮೆಟೊಪ್ರೊಲಾಲ್, ಕ್ಯಾನ್ಸರ್ ಕೀಮೋಥೆರಪಿ ಔಷಧವಾದ ಸಿಮೆಟಿಡೈನ್, ಡಿಪ್ರೆಸೆಂಟ್‌ಗಳಾದ ಆಲ್ಪ್ರಾಝಲಾಂ, ಡಯಾಜೆಪಾಮ್, ಕೊಡೀನ್, ಕೋಕೇನ್, ಆಂಫೆಟಮೈನ್‌ಗಳು, ಫ್ಯೂರೊಸೆಮೈಡ್, ಸ್ಪೈರೊನೊಲಾಕ್ಟೈನ್, ಸಿಂಥೆಟಿಕ್ ಹಾರ್ಮೋನುಗಳಾದ ಲ್ಯೂಪ್ರೊಲೈಡ್‌ಗಳಿಂದಾಗಿ ಲೈಂಗಿಕ ದೌರ್ಬಲ್ಯ ಸಮಸ್ಯೆಯನ್ನು ಎದುರಿಸಬಹುದು.

ಹೃದಯಸಂಬಂಧಿ ಸಮಸ್ಯೆ: ಹೃದಯದ ಮೇಲೆ ಹಾಗೂ ಅದರ ರಕ್ತ ಸಂಚಲನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಅಂಶಗಳು ಲೈಂಗಿಕ ದೌರ್ಬಲ್ಯಕ್ಕೂ ಕಾರಣವಾಗಬಹುದು. ಜನನೇಂದ್ರಿಯಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತಸಂಚಲನ ಸಾಧ್ಯವಾಗದೇ ಇದ್ದರೆ ಲೈಂಗಿಕ ತೃಪ್ತಿಯನ್ನೂ ಪಡೆಯುವಲ್ಲಿ ಸೋಲಬಹುದು. ರಕ್ತನಾಳಗಳು ಮುಚ್ಚಿಹೋಗುವ ಸ್ಥಿತಿಯಾದ ‘ಅಥೆರೊಸ್ಲೆರೊಸಿಸ್’ ಕೂಡ ಈ ಸಮಸ್ಯೆಯನ್ನು ತರುತ್ತದೆ. ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಹಾಗೂ ರಕ್ತದ ಏರೊತ್ತಡ–ಹೈಪರ್ ಟೆನ್ಷನ್ ಕೂಡ ದುರ್ಬಲತೆ ತರುತ್ತದೆ.

ಟಡ ಲೈಂಗಿಕ ತೃಪ್ತಿ ಪಡೆಯಲು ವ್ಯಕ್ತಿಯು ಮೊದಲು ಉತ್ಸುಕತೆಯ ಹಂತವನ್ನು ದಾಟಿ ಬರಬೇಕು. ಆದರೆ ಅದು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಸಾಮರ್ಥ್ಯ ದೊರೆಯದು.

ಲೈಂಗಿಕ ದುರ್ಬಲತೆಗೆ ಖಿನ್ನತೆ ಹಾಗೂ ಆತಂಕಗಳೂ ಪರೋಕ್ಷವಾಗಿ ಪರಿಣಾಮ ಬೀರಬಲ್ಲವು. ಈ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಎದುರಿಸಿದ ಸಮಸ್ಯೆಯ ಆತಂಕ, ಭಯವೇ ಭವಿಷ್ಯದಲ್ಲೂ ಮುಂದುವರೆಯದಂತೆ ತಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry