7

ಮದುವೆ ಊಟ ಸೇವಿಸಿ ಹಲವರು ಅಸ್ವಸ್ಥ

Published:
Updated:
ಮದುವೆ ಊಟ ಸೇವಿಸಿ ಹಲವರು ಅಸ್ವಸ್ಥ

ಕಾರಟಗಿ: ಮದುವೆ ಊಟ ಸೇವಿಸಿ ನೂರಾರು ಜನರು ಅಸ್ವಸ್ಥಗೊಂಡಿರುವ ಘಟನೆ ಸಮೀಪದ ಸಿದ್ದಾಪುರದಲ್ಲಿ ಜರುಗಿದೆ. ಗ್ರಾಮದ ಅಮರೇಶಪ್ಪ ಅವರ ಮಕ್ಕಳ ಮದುವೆ ಬುಧವಾರ ನಡೆಯಿತು. ಊಟ ಮಾಡಿದ ಹಲವರಿಗೆ ಗುರುವಾರ ಜ್ವರ, ವಾಂತಿ, ಭೇದಿ ಕಾಣಿಸಿಕೊಂಡಿದೆ. ಸಂಜೆಯ ವೇಳೆಗೆ ಅಸ್ವಸ್ಥಗೊಂಡವರ ಸಂಖ್ಯೆ 100ರ ಗಡಿ ದಾಟಿದೆ. ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಅನೇಕರು ಸಿದ್ದಾಪುರ ಮತ್ತು ಗಂಗಾವತಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರಣಪ್ಪ ಚಕೋತಿ ಪ್ರತಿಕ್ರಿಯಿಸಿ, ವಿಷಾಹಾರ ಸೇವನೆಯಿಂದ ಅನೇಕರು ಅಸ್ವಸ್ಥಗೊಂಡಿದ್ದು, ಪ್ರಾಣಾಪಾಯವಿಲ್ಲ.

ಸ್ಥಳಾಭಾವದಿಂದ ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಗೌರಿಶಂಕರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry