ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೂ ಕಾಲಿಟ್ಟ ಇ–ರಿಕ್ಷಾಗಳು

ಗಂಟೆಗೆ 25 ಕಿಲೋ ಮೀಟರ್‌ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ
Last Updated 1 ಡಿಸೆಂಬರ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಚಾಲಿತ ಇ–ರಿಕ್ಷಾಗಳು ನಗರಕ್ಕೂ ಕಾಲಿಟ್ಟಿದ್ದು,  ಪರಿಸರಸ್ನೇಹಿ ಆಟೋಗಳನ್ನು ಓಂ ಸಾಯಿ ಮೋಟಾರ್ಸ್‌ ಕಂಪೆನಿ ಪರಿಚಯಿಸಿದೆ.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪರಿಸರಸ್ನೇಹಿ ಮಯೂರಿ ಆಟೋ ರಿಕ್ಷಾಗಳಿಗೆ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅವರು ಚಾಲನೆ ನೀಡಿದರು.

ಹಲವು ವಿಶೇಷತೆಗಳನ್ನು ಒಳಗೊಂಡಿರುವ ಇ–ರಿಕ್ಷಾಗಳನ್ನು 12 ಮಾದರಿಯಲ್ಲಿ ಸಾಯ್ರಾ ಎಲೆಕ್ಟ್ರಿಕ್‌ ಆಟೋ ಲಿಮಿಟೆಡ್‌ ಕಂಪೆನಿ ಸಿದ್ಧಪಡಿಸಿದೆ. 380ರಿಂದ 450 ಕೆಜಿ ಭಾರ, ಗಂಟೆಗೆ 25 ಕಿಲೋ ಮೀಟರ್‌ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವ ಇ–ರಿಕ್ಷಾಗಳಲ್ಲಿ ನಾಲ್ಕು ಬ್ಯಾಟರಿಗಳಿದ್ದು, ಐದರಿಂದ ಏಳು ಗಂಟೆಗಳ ಕಾಲ ಚಾರ್ಜ್‌ ಮಾಡಿದಲ್ಲಿ 80 ರಿಂದ 90 ಕಿಲೋ ಮೀಟರ್‌ವರೆಗೆ ನಾಲ್ಕರಿಂದ ಐದು ಜನರನ್ನು ಕರೆದುಕೊಂಡು ಹೋಗುತ್ತದೆ. ಇವುಗಳ ಬೆಲೆ ₹1.20 ಲಕ್ಷದಿಂದ ₹ 2 ಲಕ್ಷ.

ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಇಂತಹ ಪರಿಸರಸ್ನೇಹಿ ವಾಹನಗಳು  ಬೆಂಗಳೂರು ಮಹಾನಗರಕ್ಕೆ ಹೆಚ್ಚು ಅಗತ್ಯ. ಅಲ್ಲದೆ ಇವುಗಳಿಂದ ಹೆಚ್ಚುತ್ತಿರುವ ಮಾಲಿನ್ಯವನ್ನು ಸ್ವಲ್ಪ‍ವಾದರು ತಡೆಗಟ್ಟಬಹುದು ಎಂದು ಹೇಳಿದರು.

ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ಧಪಡಿಸಿರುವ ಇ–ರಿಕ್ಷಾಗಳು ಅಲ್ಪಾವಧಿಯಲ್ಲೇ ಉತ್ತರ ಭಾರತ ದಲ್ಲಿ ಹೆಚ್ಚು ಮನ್ನಣೆ ಗಳಿಸಿವೆ. ಮೇಕ್‌ ಇನ್‌ ಇಂಡಿಯಾ, ಸ್ವಚ್ಛ ಭಾರತ ಪರಿಕಲ್ಪನೆಗೆ ತಕ್ಕಂತೆ, ಮಾಲಿನ್ಯ ರಹಿತ ಭಾರತ ನಿರ್ಮಾಣದ ಉದ್ದೇಶದಿಂದ ಈ ರಿಕ್ಷಾಗಳನ್ನು ತಯಾರಿಸಿದ್ದೇವೆ. ನಮ್ಮ ಕನಸು ಈಗ ನನಸಾಗುತ್ತಿದೆ ಎಂದು ಸಾಯ್ರಾ ಎಲೆಕ್ಟ್ರಿಕ್‌ ಕಂಪೆನಿಯ ಅಧ್ಯಕ್ಷ ವಿಜಯ್‌ ಕಪೂರ್‌ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT