7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

'ಒಖಿ' ಚಂಡಮಾರುತ: ಕರಾವಳಿ ಪಡೆಯಿಂದ 15 ಮೀನುಗಾರರ ರಕ್ಷಣೆ

Published:
Updated:
'ಒಖಿ' ಚಂಡಮಾರುತ: ಕರಾವಳಿ ಪಡೆಯಿಂದ 15 ಮೀನುಗಾರರ ರಕ್ಷಣೆ

ತಿರುವನಂತಪುರ: ‘ಒಖಿ’ ಚಂಡಮಾರುತದಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕೇರಳದ 15 ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.

ಕರಾವಳಿ ಪಡೆಯ ಹಡಗು ಕೇರಳದ ವಿಳಿಂಜಂ/ಕೊಲ್ಲಂನಲ್ಲಿ ಸಂಕಷ್ಟದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದೆ ಎಂದು ಕರಾವಳಿ ಪಡೆ ಟ್ವೀಟ್ ಮಾಡಿದ್ದು, ಅದೇ ಟ್ವೀಟ್‌ ಅನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ರೀ ಟ್ವೀಟ್ ಮಾಡಿದ್ದಾರೆ.

ಕರಾವಳಿ ಪಡೆಯ ಕಮಾಂಡರ್(ವೆಸ್ಟ್ರನ್ ಸೀಬರ್ಡ್) ಎಡಿಜಿ ಕೆ. ನಟರಾಜನ್ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿ, ‘ಒಖಿ’ ಚಂಡಮಾರುತದಿಂದ ಎದುರಾಗಿರುವ ಅಪಾಯಗಳು ಹಾಗೂ ಪಡೆಯಿಂದ ಕೈಗೊಳ್ಳಲಾಗಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry