ಶುಕ್ರವಾರ, ಫೆಬ್ರವರಿ 26, 2021
30 °C

ಜಿಎಸ್‌ಟಿ ‘ಗಬ್ಬರ್‌ ಸಿಂಗ್‌ ತೆರಿಗೆ’ ಆಗಿದ್ದರೆ ಕಾಂಗ್ರೆಸ್‌ ಅದನ್ನು ಸಂಸತ್ತಿನಲ್ಲಿ ಬೆಂಬಲಿಸಿದ್ದೇಕೆ?: ರಾಜನಾಥ್‌ ಸಿಂಗ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ ‘ಗಬ್ಬರ್‌ ಸಿಂಗ್‌ ತೆರಿಗೆ’ ಆಗಿದ್ದರೆ ಕಾಂಗ್ರೆಸ್‌ ಅದನ್ನು ಸಂಸತ್ತಿನಲ್ಲಿ ಬೆಂಬಲಿಸಿದ್ದೇಕೆ?: ರಾಜನಾಥ್‌ ಸಿಂಗ್

ಸೂರತ್‌: ‘ಜಿಎಸ್‌ಟಿಯನ್ನು ‘ಗಬ್ಬರ್‌ ಸಿಂಗ್‌ ತೆರಿಗೆ’ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌ ಅದನ್ನು ಸಂಸತ್ತಿನಲ್ಲಿ ಬೆಂಬಲಿಸಿದ್ದೇಕೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪ್ರಶ್ನಿಸಿದ್ದಾರೆ.

‌‌ಗುಜರಾತ್‌ನ ಚೌರಾಸಿಯಲ್ಲಿ ಶನಿವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಂಗ್‌, ‘ಜಿಎಸ್‌ಟಿ ‘ಗಬ್ಬರ್‌ ಸಿಂಗ್‌ ತೆರಿಗೆ’ ಆಗಿದ್ದರೆ ಸಂಸತ್‌ನಲ್ಲಿ ಅದನ್ನು ಬೆಂಬಲಿಸಿದ್ದೇಕೆ ಎಂದು ಕಾಂಗ್ರೆಸ್‌ನ ಯುವ ಮುಖಂಡನನ್ನು ಪ್ರಶ್ನಿಸಬಯಸುತ್ತೇನೆ’ ಎಂದಿದ್ದಾರೆ.

‘ಕಾಂಗ್ರೆಸ್‌ ಪಕ್ಷವು ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಲೇ ಬಂದಿದೆ. ಈಗ ಕಾಂಗ್ರೆಸ್‌ ಗುಜರಾತಿಗಳನ್ನು ಸಮುದಾಯದ ಆಧಾರದಲ್ಲಿ ಒಡೆಯಲು ಪ್ರಯತ್ನಿಸುತ್ತಿದೆ. ಇಂತಹ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಮೂರು ಮಂದಿ ಯುವಕರ ಬಗ್ಗೆ ನನಗೆ ಅನುಕಂಪವಿದೆ’ ಎಂದು ಸಿಂಗ್‌ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.