ಶನಿವಾರ, ಮಾರ್ಚ್ 6, 2021
24 °C

ಚಲಿಸುತ್ತಿದ್ದ ವಾಹನದಿಂದ ಕೆಳಕ್ಕೆ ಹಾರಿದ ಗರ್ಭಿಣಿ, ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚಲಿಸುತ್ತಿದ್ದ ವಾಹನದಿಂದ ಕೆಳಕ್ಕೆ ಹಾರಿದ ಗರ್ಭಿಣಿ, ಸಾವು

ಹೈದರಾಬಾದ್: ವಾಹನ ಚಾಲಕ ಹಾಗೂ ಕ್ಲೀನರ್‌ನ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ವಾಹನದಿಂದ ಹಾರಿದ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ತೆಲಗಾಂಣದ ಮೇಧಕ್ ಜಿಲ್ಲೆಯ ರಾವೇಲಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೃತರನ್ನು ಉಧೆ ಕಲಾವತಿ ಎಂದು ಗುರುತಿಸಲಾಗಿದೆ. ಈ ಮಹಿಳೆ ಏಳು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಮೃತ ಮಹಿಳೆಯ ಸಂಬಂಧಿಕರು ಭಾನುವಾರ ಚಾಲಕ ಹಾಗೂ ಕ್ಲೀನರ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ಕಲಾವತಿ ಅವರು ಕೊಪ್ಪಳ್ಳಿಯಲ್ಲಿ ಹಳೆ ಬಟ್ಟೆಗಳನ್ನು ಮಾರಾಟ ಮಾಡಿ, ಏಳು ವರ್ಷದ ಮಗಳ ಜತೆ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಆಗ ಆರೋಪಿಗಳಿಬ್ಬರು ಕಲಾವತಿಗೆ ಟೋಲ್‌ ಹಣ ಕಟ್ಟುವಂತೆ ಹೇಳಿದ್ದರು. ಬಳಿಕ, ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆ ಚಲಿಸುತ್ತಿದ್ದ ವಾಹನದಿಂದ ಕೆಳಗೆ ಜಿಗಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕ ಹಾಗೂ ಕ್ಲೀನರ್‌ನನ್ನು ಬಂಧಿಸದ ವಿನಃ ಈ ಘಟನೆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಸಂಬಂಧಿಕರ ದೂರಿನ ಅನ್ವಯ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಲೈಂಗಿಕ ಕಿರುಕುಳ ಎಂದು ಸಾಬೀತಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತೋಪ್ರಾನ್ ಸಂಚಾರ ಪೊಲೀಸ್ ಲಿಂಗೇಶ್ವರ್ ರಾವ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.