ನಟ ಶಶಿ ಕಪೂರ್‌ ನಿಧನ, ಶಶಿ ತರೂರ್‌ ಕಚೇರಿಗೆ ಕರೆ!

7

ನಟ ಶಶಿ ಕಪೂರ್‌ ನಿಧನ, ಶಶಿ ತರೂರ್‌ ಕಚೇರಿಗೆ ಕರೆ!

Published:
Updated:
ನಟ ಶಶಿ ಕಪೂರ್‌ ನಿಧನ, ಶಶಿ ತರೂರ್‌ ಕಚೇರಿಗೆ ಕರೆ!

ಮುಂಬೈ: ಬಾಲಿವುಡ್‌ ನಟ ಶಶಿ ಕಪೂರ್‌ ಆರೋಗ್ಯ ಸ್ಥಿತಿ ಕುರಿತು ಪತ್ರಕರ್ತರು ಸೇರಿ ಹಲವರು ನಮ್ಮ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರು ಟ್ವೀಟಿಸಿದ್ದಾರೆ.

‘ಶ್ರೇಷ್ಠ ನಟ, ಸ್ಫುರದ್ರೂಪಿ, ಆಗಾಗ್ಗೆ ನನ್ನ ಹೆಸರಿನೊಂದಿಗೆ ಅವರ ಹೆಸರು ಸೇರಿ ಗೊಂದಲ ಸೃಷ್ಟಿಯಾಗುತ್ತಿತ್ತು. ನನ್ನದೇ ಒಂದು ಭಾಗ ಕಳೆದುಕೊಂಡಂತೆ ಅನಿಸುತ್ತಿದೆ.’ ಎಂದು ನಟ ಶಶಿ ಕಪೂರ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶಶಿ ಕಪೂರ್‌ ಹೆಸರನ್ನು ಶಶಿ ತರೂರ್‌ ಎಂದು ಗೊಂದಲ ಸೃಷ್ಟಿಸಿಕೊಂಡ ಕೆಲವರು ಆರೋಗ್ಯ ಸ್ಥಿತಿ ವಿಚಾರಿಸಲು ಶಶಿ ತರೂರ್‌ ಕಚೇರಿಗೆ ಕರೆ ಮಾಡಿದ್ದಾರೆ. 

ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟ ಶಶಿ ಕಪೂರ್ (79) ಅವರು ಮುಂಬೈನಲ್ಲಿ ಸೋಮವಾರ ನಿಧನರಾದರು. ಅವರನ್ನು ಮುಂಬೈನ ಕೋಕಿಲಾ ಬೆನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry