ಭಾನುವಾರ, ಮಾರ್ಚ್ 7, 2021
30 °C

‘ತಾಜ್‌’ 2ನೇ ಉತ್ತಮ ಪಾರಂಪರಿಕ ತಾಣ

ಪಿಟಿಐ Updated:

ಅಕ್ಷರ ಗಾತ್ರ : | |

‘ತಾಜ್‌’ 2ನೇ ಉತ್ತಮ ಪಾರಂಪರಿಕ ತಾಣ

ನವದೆಹಲಿ: ಯುನೆಸ್ಕೊದ ಉತ್ತಮ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತಾಜ್‌ಮಹಲ್ ಎರಡನೇ ಸ್ಥಾನದಲ್ಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಕಾಂಬೋಡಿಯಾದ ದೇವಾಲಯ ಸಂಕೀರ್ಣ ಅಂಕೂರ್‌ವಾಟ್‌ ಮೊದಲ ಸ್ಥಾನ ಗಿಟ್ಟಿಸಿದೆ.

ಯುನೆಸ್ಕೊದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳ ಪಟ್ಟಿಯನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ. ಪ್ರಯಾಣ ಸೌಲಭ್ಯ ಒದಗಿಸುವ ಅಂತರ್ಜಾಲ ತಾಣ ‘ಟ್ರಿಪ್‌ ಅಡ್ವೈಸರ್’ ಸಮೀಕ್ಷೆ ನಡೆಸಿದ್ದು, ಉತ್ತಮ ಪಾರಂಪರಿಕ ತಾಣಗಳ ಪಟ್ಟಿಯನ್ನು ಅದು ಸಿದ್ಧಪಡಿಸಿದೆ. ವಿಶ್ವದಾದ್ಯಂತ ಪ್ರವಾಸಿಗರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

‘ಅದ್ಭುತ ತಾಣ ತಾಜ್‌ಮಹಲ್‌ಗೆ ಭೇಟಿ ನೀಡಿದರೆ ನೂರಾರು ಅವಿಸ್ಮರಣೀಯ ಅನುಭವಗಳು ನಿಮ್ಮದಾಗುತ್ತವೆ. ಖಾಸಗಿ ಪ್ರವಾಸಿ ಮಾರ್ಗದರ್ಶಕರು ಇಲ್ಲಿ ಸಿಗುತ್ತಾರೆ. ಸೂರ್ಯೋದಯ, ಸೂರ್ಯಾಸ್ತ ತಾಣಗಳಲ್ಲಿ ಕಾಲ ಕಳೆಯಬಹುದು. ಸ್ಥಳೀಯ ಆಹಾರ ಸವಿಯಲು ಬಯಸುವವರಿಗೆ ಅಂಥ ಅವಕಾಶ ಮಾಡಿಕೊಡುವ ಹಲವು ಮನೆಗಳೂ ಆಗ್ರಾದಲ್ಲಿ ಇವೆ’ ಎಂದು ಟ್ರಿಪ್‌ ಅಡ್ವೈಸರ್ ಹೇಳಿದೆ.

ತಾಜ್‌ಮಹಲ್‌ಗೆ ವಾರ್ಷಿಕ 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.

ಇತರ ಉತ್ತಮ ತಾಣಗಳು

ಚೀನಾ ಮಹಾಗೋಡೆ, ಮಾಚು ಪಿಚು ಕೋಟೆ (ದಕ್ಷಿಣ ಆಫ್ರಿಕಾ), ಇಗುವಾಜು ರಾಷ್ಟ್ರೀಯ ಉದ್ಯಾನ (ಬ್ರೆಜಿಲ್), ಪುರಾತನ ಗುಹೆಗಳಿರುವ ಸಸ್ಸಿ ಡಿ ಮಟೆರಾ (ಇಟಲಿ), ಅಶ್‌ವಿಟ್ಸ್ ಬಿರ್ಕೆನೌ ಸ್ಮಾರಕ ವಸ್ತುಸಂಗ್ರಹಾಲಯ, ಐತಿಹಾಸಿಕ ಕ್ರಕೋವ್ ನಗರ (ಪೋಲಂಡ್), ಇಸ್ರೇಲ್‌ನ ಜೆರುಸಲೇಮ್‌ನ ಓಲ್ಡ್‌ ಸಿಟಿ ಪ್ರದೇಶ ಮತ್ತು ಟರ್ಕಿಯ ಇಸ್ತಾಂಬುಲ್‌ನ ಐತಿಹಾಸಿಕ ಸ್ಥಳಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.