ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ

Last Updated 7 ಡಿಸೆಂಬರ್ 2017, 11:05 IST
ಅಕ್ಷರ ಗಾತ್ರ

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಆಚರಿಸಿದರು.

ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಉಪ ತಹಶೀಲ್ದಾರ್ ಭೀಮಾಶಂಕರ ಕುದರಿ, ಉಪನ್ಯಾಸಕ ರಮೇಶ ಮಾಡಿಯಾಳಕರ, ಮುಖಂಡ ದಯಾನಂದ ಶೇರಿಕಾರ, ದತ್ತಾ ಅಟ್ಟೂರು, ರಾಕೇಶ ಲಾಡ ಚಿಂಚೋಳಿ, ರಾಮಚಂದ್ರ ಹಕ್ಕಿ, ಸುಮನ ಕವಲಗಾ, ಸುಜಾತ ಇಕ್ಕಳಕಿ, ರಮೇಶ, ಪ್ರಭಾಕರ ಹೆಬಳಿ ಇದ್ದರು.

ಪುರಸಭೆಯಲ್ಲಿಯೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ಇದ್ದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪುರಸಭೆ ಸದಸ್ಯ ಸುನಿಲ ಹಿರೋಳ್ಳಿಕರ, ಚನ್ನವೀರ ಕಾಳಕಿಂಗೆ, ಲಕ್ಷ್ಮಣ ಬೀಳಗಿ, ಮಹೇಶ ಗೌಳಿ ಇದ್ದರು.
ಪಟ್ಟಣದ ಪಾಟೀಲ ಲೇಔಟ್‌ನಲ್ಲಿ ಡಾ.ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು. ಸಂಘದ ಅಧ್ಯಕ್ಷ ನಾಮದೇವ ಕೋರಳ್ಳಿ, ಅಮೃತರಾವ ಹಿರೋಳ್ಳಿಕರ, ಲಕ್ಷ್ಮಣ ನವಲೆ, ಶಿವಾನಂದ ಜಾನೆ, ಸುನೀಲ ಹಿರೋಳ್ಳಿಕರ, ಕಾಶಿನಾಥ ಸಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT