ಶುಕ್ರವಾರ, ಮಾರ್ಚ್ 5, 2021
26 °C

ದಾವಣಗೆರೆಯ ತ್ಯಾವಣಿಗೆಯಲ್ಲಿ ಆನೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆಯ ತ್ಯಾವಣಿಗೆಯಲ್ಲಿ ಆನೆ ದಾಳಿ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆಯಲ್ಲಿ ಆನೆ ದಾಳಿಯಿಂದ ಗಣೇಶ್ (42) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಣೇಶ್‌ ಸಂಬಂಧಿ ಜಗದೀಶ್ ಎಂಬುರವ ಜತೆ ಹುಲ್ಲು ಕೊಯ್ಯಲು ಹೊಲಕ್ಕೆ ಹೋಗಿದ್ದಾಗ ಆನೆ ಏಕಾಏಕಿ ದಾಳಿ ಮಾಡಿದೆ. ಗಣೇಶ್ ಅವರ ಹೊಟ್ಟೆಗೆ ಆನೆ ದಂತದಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ದಾಳಿಯಿಂದ ಅಶೋಕ್ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.ಎರಡು ಆನೆಗಳು ಸೂಳೆಕೆರೆ ಅರಣ್ಯದಲ್ಲಿ ಬೀಡುಬಿಟ್ಟಿವೆ. ಆನೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭೀತಿಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.