ಸೋಮವಾರ, ಮಾರ್ಚ್ 8, 2021
26 °C

ರಕ್ತದಲ್ಲೇ ಇದೆ ಮದ್ದು...

ಡಾ. ಎಸ್.ಎಸ್. ವಾಸನ್ Updated:

ಅಕ್ಷರ ಗಾತ್ರ : | |

ರಕ್ತದಲ್ಲೇ ಇದೆ ಮದ್ದು...

ಲೈಂಗಿಕ ದೌರ್ಬಲ್ಯ ಎಂದು ಪರಿಗಣಿಸಬಹುದಾದ ಹಲವು ಅಂಶಗಳಲ್ಲಿ ನಿಮಿರುವಿಕೆ ಸಮಸ್ಯೆ ಬಹು ಸಾಮಾನ್ಯ ಪ್ರಕರಣವಾಗಿಬಿಟ್ಟಿದೆ. ಸಹಜವಾಗಿ ನಿಮಿರುವಿಕೆಗೆ ಕಾರಣವಾಗುವ ಅಂಗಾಂಶ ಸ್ಪಂದಿಸಲು ಸಾಧ್ಯವಾಗದೇ ಇರುವಾಗಲೇ ಸಮಸ್ಯೆ ಆರಂಭಗೊಳ್ಳುವುದು. ಇದು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ, ಅಷ್ಟೇ ಅಲ್ಲ, ಲೈಂಗಿಕ ಜೀವನದ ಮೇಲೂ ಗಾಢ ಪರಿಣಾಮ ಬೀರುತ್ತದೆ. ಇದಕ್ಕೆ ಇತ್ತೀಚೆಗೆ ಲಭ್ಯವಿರುವ, ಹಾಗೆಯೇ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಎಂದರೆ, ಸ್ಟೆಮ್ ಸೆಲ್ ಟ್ರೀಟ್‌ಮೆಂಟ್.

ಜನನೇಂದ್ರಿಯಕ್ಕೆ ರಕ್ತಸಂಚಲನದಲ್ಲಿ ತೊಡಕಾಗುವುದೇ ನಿಮಿರುವಿಕೆಗೆ ಇರುವ ಬಹು ಸಾಮಾನ್ಯ ಕಾರಣ. ಸುಮಾರು ಶೇ. 80ರಷ್ಟು ಮಂದಿಗೆ, ಇದೇ ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆ. ಇದಕ್ಕೆಂದು ವಾಸೊಲಿಡೇಟರ್‌ನಂಥ ಕೆಲವು ಔಷಧಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ವಯಾಗ್ರ ಹಾಗೂ ಸಿಯಾಲಿಸ್‌ನಂಥ ಔಷಧಗಳನ್ನೂ ನೀಡಲಾಗುತ್ತದೆ.

ನಿಮಿರುವಿಕೆ ಸಮಸ್ಯೆಯ ಮೂಲ ಹಾಗೂ ಕಾರಣವನ್ನು ಸ್ಪಷ್ಟವಾಗಿ ತಿಳಿದುಕೊಂಡು ಅದರ ಆಧಾರದ ಮೇಲೆ ಇನ್ನಿತರ ಚಿಕಿತ್ಸೆಗಳಾದ, ಇಂಜೆಕ್ಟ್‌ ಔಷಧಗಳು, ಹಾರ್ಮೋನ್‌ ರಿಪ್ಲೇಸ್‌ಮೆಂಟ್ ಅಥವಾ ಸಪೋಸಿಟೊರಿಗಳನ್ನು ನೀಡಲಾಗುತ್ತದೆ. ಪಂಪ್‌ಗಳು ಹಾಗೂ ಇಂಪ್ಲಾಂಟ್‌ಗಳಂಥ ಸಾಧನಗಳೂ ಉಪಯೋಗಕ್ಕೆ ಬರುತ್ತವೆ.

ಆದರೆ ಸಮಸ್ಯೆ ಎಂದರೆ, ಈ ಬಹುಪಾಲು ಚಿಕಿತ್ಸೆಗಳು ತಾತ್ಕಾಲಿಕ ಪರಿಹಾರವನ್ನಷ್ಟೇ ನೀಡುತ್ತವೆ. ಜೊತೆಗೆ ಪದೇ ಪದೇ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ, ವಾಸೊಡಿಲೇಟರ್‌ನಂಥ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಿಲ್ಲ.

ಇದರೊಂದಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂಥ ಕೆಲವು ಗಂಭೀರ ಅಡ್ಡಪರಿಣಾಮಗಳನ್ನೂ ತಂದೊಡ್ಡಬಹುದು.

ರಕ್ತದಿಂದಲೇ ಹೇಗೆ ಸಮಸ್ಯೆಯನ್ನು ತಡೆಯಬಹುದು ಪ್ಲೇಟ್‌ಲೆಟ್ ರಿಚ್ ಗ್ರೋತ್ ಫ್ಯಾಕ್ಟರ್ ಪ್ಲಾಸ್ಮಾ (ಪಿಆರ್‌ಜಿಎಫ್) ರಕ್ತದ ಭಾಗವಾಗಿದ್ದು, ಪ್ಲೇಟ್‌ಲೆಟ್‌ಗಳನ್ನು ಒಳಗೊಂಡಿರುತ್ತದೆ. ಇದು ಹೊಸ ರಕ್ತನಾಳಗಳ ಬೆಳವಣಿಗೆಗೆ ಅವಶ್ಯಕವಿರುವ ಪ್ರೊಟೀನನನ್ನು ನೀಡುವ ವ್ಯಾಸ್ಕುಲರ್ ಎಂಡೋಥೆಲಿಯಲ್ ಗ್ರೋಥ್ ಫ್ಯಾಕ್ಟರ್ (ವಿಇಜಿಎಫ್)ಗಳನ್ನು ಒಳಗೊಂಡಿರುತ್ತದೆ.

ವಿಇಜಿಎಫ್ – ಈ ವ್ಯವಸ್ಥೆಯ ಭಾಗವಾಗಿದ್ದು, ಇದು ಜೀವಕೋಶಗಳಿಗೆ ಹಾಗೂ ಅಂಗಾಂಶಗಳಿಗೆ ರಕ್ತ ಸರಬರಾಜುವಿಗೂ ಕಾರಣವಾಗಿರುತ್ತದೆ. ಈ ಮೂಲಕ ಸಮಸ್ಯೆ ನಿರ್ವಹಣೆಗೆ ಮಾರ್ಗ ನೀಡಬಲ್ಲದು.

ವಿಇಜಿಎಫ್ ಪ್ರೊಟೀನುಗಳನ್ನು ಬೆಳವಣಿಗೆಯ ಅಂಶಗಳೆಂದು ಪರಿಗಣಿಸಲಾಗಿದೆ. ಮ್ಯಾಕ್ರೊಫೇಜಸ್, ಕೆರಟಿನೊಸೈಟ್ಸ್, ಟ್ಯೂಮರ್ ಸೆಲ್ಸ್, ಪ್ಲೇಟ್‌ಲೆಟ್ಸ್‌ ಹಾಗೂ ಮೆನಿಂಗೀಲ್‌ನಂಥ ಭಿನ್ನ ಕೋಶಗಳನ್ನು ಇದು ಹೊಂದಿರುತ್ತದೆ.

ವಿಇಜಿಎಫ್, ಮೂಳೆ ಹಾಗೂ ರಕ್ತದ ರಚನೆಯಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಗಾಯ ಮಾಗಲು, ಭ್ರೂಣದ ಬೆಳವಣಿಗೆಗೂ ಇದು ಅತ್ಯವಶ್ಯಕ. ರಕ್ತನಾಳಗಳಿಗೆ ಅಡ್ಡಿಯಾದ ಪಕ್ಷದಲ್ಲಿ, ವಿಇಜಿಎಫ್, ಹೊಸ ರಕ್ತನಾಳಗಳನ್ನು ಸೃಷ್ಟಿಸಲು ಸಹಕಾರಿಯಾಗಿದೆ. ಈ ವಿಇಜಿಎಫ್ ಸೊಲ್ಯೂಷನ್ ಅನ್ನು ರೋಗಿಯ ರಕ್ತದಿಂದಲೇ ಸಿದ್ಧಗೊಳಿಸಿ, ಅದನ್ನು ಜನನಾಂಗಕ್ಕೆ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತದೆ.

ಔಷಧ ಹಾಗೂ ಕೃತಕ ಇಂಪ್ಲಾಂಟ್‌ಗಳ ಬದಲಿಯಾಗಿ ಈ ಸ್ಟೆಮ್‌ ಸೆಲ್ ಚಿಕಿತ್ಸೆ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ಲೇಟ್‌ಲೆಟ್‌ ರಿಚ್ ಪ್ಲಾಸ್ಮಾ ಗ್ರೋಥ್ ಫ್ಯಾಕ್ಟರ್‌ನಂಥ ಚಿಕಿತ್ಸೆಗಳು ಅಂಗಾಂಶಗಳ ದೋಷಗಳು ಅಥವಾ ನಿಮಿರುವಿಕೆಗೆ ಸಂಬಂಧಿಸಿದ ನಾಳದ ಸಮಸ್ಯೆಗಳಿಗೆ ದೀರ್ಘಕಾಲೀನ ಥೆರಪಿಯಂತೆ ಕೆಲಸ ನಿರ್ವಹಿಸುತ್ತವೆ. ಬೇರೆ ಚಿಕಿತ್ಸೆಗೆ ಹೋಲಿಸಿದರೆ, ಇದು ಶಾಶ್ವತ ಪರಿಣಾಮವನ್ನು ತರುತ್ತವೆ.

ಸ್ಟೆಮ್‌ ಸೆಲ್ ಚಿಕಿತ್ಸೆಯು ನಿಮಿರುವಿಕೆಯ ಹಿಂದಿನ ಹಲವು ಕಾರಣಗಳನ್ನು, ಅಂದರೆ ಮಧುಮೇಹ, ಮೆಟಬಾಲಿಕ್ ವ್ಯವಸ್ಥೆ, ಕಡಿಮೆ ಟೆಸ್ಟೊಸ್ಟೆರೋನ್, ಪೆನೈಲ್ ಸೆಲ್ ಟಿಶ್ಯೂ ಡ್ಯಾಮೇಜ್‌ನಂಥ ಹಲವು ಕಾರಣಗಳಿಗೆ ಪರಿಣಾಮಕಾರಿ ಚಿಕಿತ್ಸೆ ಆಗಬಲ್ಲದು.

ನಮ್ಮ ದೇಹದಲ್ಲಿ ಜೀವಕೋಶಗಳು ಇವೆ. ಅವು ಪುನರುತ್ಪತ್ತಿಯಾಗಬಲ್ಲವು; ಹಾಗೆಯೇ ದೇಹದ ಇನ್ನಿತರ ಕೋಶಗಳನ್ನು ಸರಿಪಡಿಸುವ ಸಾಮರ್ಥ್ಯವೂ ಅವುಗಳಿಗಿರುತ್ತದೆ. ಸಹಜವಾಗೇ ಈ ಕೋಶಗಳು ಇಡೀ ದೇಹದಲ್ಲಿ ಇರುತ್ತವೆ. ಈ ಸ್ಟೆಮ್ ಸೆಲ್ ಚಿಕಿತ್ಸೆ ಕೂಡ ಅದೇ ಹಾದಿಯಲ್ಲಿದ್ದು, ಜನನಾಂಗದ ಅಂಗಾಂಶಗಳನ್ನೂ ಮತ್ತೆ ಸರಿಪಡಿಸಬಲ್ಲದು.

ಸ್ಟೆಮ್ ಸೆಲ್ ಥೆರಪಿ, ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸಲು ದೇಹದ ಸಹಜ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ಚಿಕಿತ್ಸೆಯ ಪ್ರಕ್ರಿಯೆಯೂ ಸುರಕ್ಷಿತ. ಇದಕ್ಕೆ ನಿಮ್ಮ ದೇಹದ್ದೇ ಸ್ಟೆಮ್‌ ಸೆಲ್‌ಗಳನ್ನು ಬಳಸಿಕೊಳ್ಳುವುದರಿಂದ ಅಲರ್ಜಿಯಾಗುವ, ಅಥವಾ ಇನ್ನಿತರ ಪ್ರತಿಕ್ರಿಯೆ ತೋರುವ ಸಂಭವವೂ ಇರುವುದಿಲ್ಲ. ಜೊತೆಗೆ ಜನರಲ್ ಅನಸ್ತೇಷಿಯಾ ಕೂಡ ಬಳಸುವುದಿಲ್ಲ.

ಚಿಕಿತ್ಸೆ ನಂತರದ ನಿರೀಕ್ಷೆಗಳು ಏನು?

ಚಿಕಿತ್ಸೆ ನಂತರದ 24 ಗಂಟೆಗಳಲ್ಲಿ ಊತ, ಕೆಂಪಾಗುವುದು ಕಂಡುಬರುತ್ತದೆ. ಎರಡು ಮೂರು ವಾರಗಳಲ್ಲಿಯೇ ಫಲಿತಾಂಶ ಗೋಚರಿಸಲು ಶುರುವಾಗುತ್ತದೆ. ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಸುಧಾರಣೆಗಳು ಕಂಡುಬರುತ್ತವೆ. ಹಲವು ವರ್ಷಗಳವರೆಗೂ ಮುಂದುವರೆಯುತ್ತದೆ. ಈ ಫಲಿತಾಂಶ ಜೀವನಶೈಲಿ, ವಂಶವಾಹಿ ಹಾಗೂ ಕೆಲವು ಅಭ್ಯಾಸದ ಮೇಲೂ ಅವಲಂಬಿತವಾಗಿರುತ್ತದೆ.

ಸಾಕಷ್ಟು ರೋಗಿಗಳಿಗೆ ಹಲವು ವರ್ಷಗಳವರೆಗೂ ಚಿಕಿತ್ಸೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಕೆಲವು ಪ್ರಕರಣಗಳಲ್ಲಿ, ಇದಕ್ಕೆ ಬೂಸ್ಟರ್ ಟ್ರೀಟ್‌ಮೆಂಟ್‌ನ ಅವಶ್ಯಕತೆ ಕಂಡುಬಂದಿದೆ. ಚಿಕಿತ್ಸೆ ನಂತರ ದಿನಚರಿಯೂ ಸರಾಗವಾಗಿ ನಡೆಯಬಹುದು.

*

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.