ಆರ್ಡಬ್ಲ್ಯುಎಫ್ ತಂಡಕ್ಕೆ ಜಯ

ಬೆಂಗಳೂರು: ಉಮೇಶ್ ತಂದಿತ್ತ ಎರಡು ಗೋಲುಗಳ ಬಲದಿಂದ ಆರ್ಡಬ್ಲ್ಯುಎಫ್ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ಹಾಕಿ ಲೀಗ್ ಪಂದ್ಯದಲ್ಲಿ ಜಯ ದಾಖಲಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಡಬ್ಲ್ಯುಎಫ್ ತಂಡ 4–2 ಗೋಲುಗಳಲ್ಲಿ ಎಮ್ಎಲ್ಐಆರ್ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಉಮೇಶ್ 13 ಮತ್ತು 39ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿದರು. ಸುಶೀಲ್ (17ನೇ ನಿ.) ಹಾಗೂ ಆಂಜನೇಯ (68ನೇ ನಿ.) ತಲಾ ಒಂದು ಗೋಲು ತಂದುಕೊಟ್ಟರು.
ಎಮ್ಎಲ್ಐಆರ್ಸಿ ತಂಡದ ಅಕ್ಷಯ್ (46ನೇ ನಿ.), ಗಣೇಶ್ ಪಾಟೀಲ್ (65ನೇ ನಿ.) ಚೆಂಡನ್ನು ಗುರಿ ಸೇರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.