ಬುಧವಾರ, ಮಾರ್ಚ್ 3, 2021
28 °C

ಕುಮಾರಸ್ವಾಮಿ ಕಾರ್ಯಕ್ರಮಗಳ ಸುದ್ದಿ ಮೊಬೈಲ್‌ನಲ್ಲಿ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಾರಸ್ವಾಮಿ ಕಾರ್ಯಕ್ರಮಗಳ ಸುದ್ದಿ ಮೊಬೈಲ್‌ನಲ್ಲಿ ಲಭ್ಯ

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸುವ ಕಾರ್ಯಕ್ರಮಗಳ ಸುದ್ದಿಯನ್ನು ಮೊಬೈಲ್‌ ಮೂಲಕ ತಲುಪಿಸುವ ವ್ಯವಸ್ಥೆಯನ್ನು ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಮಾಡಿದೆ.

94839 86999 ಮೊಬೈಲ್‌ ಸಂಖ್ಯೆಗೆ ಒಂದು ಮಿಸ್ಡ್‌ಕಾಲ್ ಕೊಟ್ಟರೆ ಅದನ್ನು ‘ನಮ್ಮ ಎಚ್ ಡಿ ಕೆ’ ಸಾಮಾಜಿಕ ಜಾಲತಾಣದಲ್ಲಿ ನೋಂದಾಯಿಸಲಾಗುತ್ತದೆ. ಕುಮಾರಸ್ವಾಮಿ ಅವರ ಸಭೆ, ಸಮಾರಂಭ, ಭಾಷಣ, ಮಾಧ್ಯಮಗೋಷ್ಠಿಗಳು ಹಾಗೂ ದೈನಂದಿನ ಸಭೆಗಳ ಕುರಿತು ದಿನಕ್ಕೆ ಮೂರು ಬಾರಿ ಸುದ್ದಿಗಳನ್ನು ಮೊಬೈಲ್‌ ಮೂಲಕ ತಲುಪಿಸಲಾಗುತ್ತದೆ. 

ಕೇವಲ ಸುದ್ದಿಗಳಷ್ಟೇ ಅಲ್ಲದೆ ಆಡಿಯೊ, ವಿಡಿಯೊಗಳನ್ನೂ ಕಳುಹಿಸಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ ಕುಮಾರಸ್ವಾಮಿ ಅವರ ಅಂದಿನ ಕಾರ್ಯಕ್ರಮಗಳ ವಿವರ ನೀಡಲಾಗುತ್ತದೆ. ಡಿ.10ರಿಂದ ಮಿಸ್ಡ್‌ಕಾಲ್ ನೋಂದಣಿ ಆರಂಭವಾಗಲಿದೆ.

‘ನಮ್ಮ ಎಚ್.ಡಿ.ಕೆ’ ಜಾಲತಾಣ ಈಗಾಗಲೇ ಫೇಸ್‌ಬುಕ್, ಟ್ವಿಟರ್, ಯು ಟ್ಯೂಬ್, ಸೌಂಡ್ ಕ್ಲೌಡ್‌ನಲ್ಲಿ ಜೆಡಿಎಸ್‌ ನಾಯಕರ ಕಾರ್ಯಕ್ರಮಗಳ ಮಾಹಿತಿ ಒದಗಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಮೊಬೈಲ್‌ ಮೂಲಕವೂ ಜನರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.