ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗೆ ಬಟರ್‌ ಚಿಕನ್‌ ಇಷ್ಟ

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೃತಿ ಸನೊನ್‌ ಹೆಸರು ಹೇಳಿದಾಕ್ಷಣ ‘ಅದ್ಭುತ ನಟಿ’ ಎಂಬ ಉದ್ಗಾರ ಬಾಯಿಂದ ಹೊರಡುತ್ತದೆ. ಸಹಜ ಸುಂದರಿ ಹಾಗೂ ಸುಂದರ ಅಂಗಸೌಷ್ಟವ ಹೊಂದಿರುವ ಕೃತಿ ಸನೊನ್‌ ತಮ್ಮ ಮೊದಲ ಸಿನಿಮಾ ‘ಹಿರೋಪಥಿ’ಯಲ್ಲಿಯೇ ಕ್ಲಾಸಿಕ್‌ ಲುಕ್‌ ಹಾಗೂ ನಗುವಿನ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು.

ದೇಹದ ಸೌಂದರ್ಯ ಹಾಗೂ ಫಿಟ್‌ನೆಸ್‌ಗಾಗಿ ಕೃತಿ ಹೆಚ್ಚು ಕಾಳಜಿ ವಹಿಸುತ್ತಾರೆ. ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಪ್ರತಿದಿನ ಮಾಯಿಶ್ಚರೈಸರ್‌ ಹಚ್ಚಿಕೊಳ್ಳುತ್ತಾರೆ. ಚಿತ್ರೀಕರಣ ಅಥವಾ ಕಾರ್ಯಕ್ರಮದಿಂದ ಹಿಂತಿರುಗಿದ ಕೂಡಲೇ ಮುಖದ ಮೇಕಪ್‌ ತೊಳೆದು ಮಾಯಿಶ್ಚರೈಸರ್‌ ಹಚ್ಚುತ್ತಾರೆ. ಮಸ್ಕರಾ, ಲಿಪ್‌ಬಾಮ್‌ ಹೀಗೆ ಕೆಲವೇ ಕೆಲವು ಅಲಂಕಾರಿಕ ಸಾಧನಗಳನ್ನು ಬಳಸುತ್ತಾರೆ.

ತಲೆಕೂದಲ ಆರೈಕೆ ಬಗ್ಗೆಯೂ ಕಾಳಜಿ ವಹಿಸುವ ಅವರು ನಿಯಮಿತವಾಗಿ ಹೇರ್‌ ಸ್ಪಾ ಮಾಡಿಸಿಕೊಳ್ಳುತ್ತಾರೆ. ಮಾಂಸಹಾರಿಗಳು ತ್ವಚೆ ಹಾಗೂ ಕೂದಲ ಆರೈಕೆಗಾಗಿ ಮೀನು ಸೇವಿಸಬೇಕು ಎಂಬುದು ಕೃತಿ ಸಲಹೆ. ಇದಲ್ಲದೇ ಹೊಳಪು ಚರ್ಮಕ್ಕಾಗಿ ಲೀಟರ್‌ಗಟ್ಟಲೇ ನೀರು ಕುಡಿಯುತ್ತಾರಂತೆ.

ಫಿಟ್‌ನೆಸ್‌

ದೇಹ ಫಿಟ್‌ ಇರಲು ಪ್ರತಿದಿನ ಯೋಗ ಹಾಗೂ ಪ್ರಾಣಾಯಾಮ ಮಾಡುತ್ತಾರೆ. ದೇಹದ ತೂಕ ಅತಿ ಬೇಗ ಕಳೆದುಕೊಳ್ಳಲು ಸಲುವಾಗಿ ಕಾರ್ಡಿಯೊ ಮೊರೆ ಹೋಗಲು ಇವರಿಗೆ ಇಷ್ಟವಿಲ್ಲ. ಆದರೆ ಪ್ರತಿದಿನ ಯೋಗ ಹಾಗೂ ಪ್ರಾಣಾಯಾಮ ಮಾಡುತ್ತಿದ್ದರೆ ದೇಹ ಫಿಟ್‌ ಆಗಿರುತ್ತದೆ. ದೇಹದ ಯಾವುದೇ ಭಾಗದಲ್ಲಿ ಕೊಬ್ಬು ಸಂಗ್ರಹ ಆಗದು ಎಂಬುದು ಕೃತಿ ಸಲಹೆ. ಇವರಿಗೆ ಕಿಕ್‌ ಬಾಕ್ಸಿಂಗ್‌ ಮೇಲೆಯೂ ಆಸಕ್ತಿ ಇದೆ. ಇದು ಬುದ್ಧಿಶಕ್ತಿಯನ್ನು ಹೆಚ್ಚು ಚುರುಕಾಗಿಸುತ್ತದೆ ಮತ್ತು ದೇಹದ ಸಮತೋಲನ ಕಾಪಾಡುತ್ತದೆ ಎನ್ನುತ್ತಾರೆ ಅವರು.  ಸಾಲ್ಸಾ ನೃತ್ಯವನ್ನೂ ಕಲಿತಿದ್ದಾರೆ. ಇದು ನೃತ್ಯದ ಖುಷಿಯ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಹಾರ ಶೈಲಿ

ಬೆಳಿಗ್ಗೆ ಎದ್ದ ಕೂಡಲೇ ಬಿಸಿನೀರಿಗೆ ಎರಡು ಚಮಚ ಜೇನು ಹಾಕಿಕೊಂಡು ಸೇವಿಸುತ್ತಾರೆ. ಮುಂಜಾನೆ ಎರಡು ಮೊಟ್ಟೆ, ಬ್ರೌನ್‌ ಬ್ರೆಡ್‌ ಮತ್ತು ಒಂದು ಗ್ಲಾಸ್‌ ಹಣ್ಣಿನ ರಸ ಅಥವಾ ಪ್ರೊಟೀನ್ ಶೇಕ್ ಕುಡಿಯುತ್ತಾರೆ. ಮಧ್ಯಾಹ್ನ ಎರಡು ಚಪಾತಿ, ಒಂದು ಬೌಲ್‌ ಅನ್ನ, ಮೀನು ಅಥವಾ ತರಕಾರಿ ಖಾದ್ಯ. ಸಂಜೆ ಒಂದು ಕಪ್‌ ಕಾರ್ನ್‌ ತಿನ್ನುತ್ತಾರೆ.

ಖಾರ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ಕೃತಿಗೆ ವರ್ಜ್ಯ. ಆಗಾಗ್ಗೆ ಹಣ್ಣು ಅಥವಾ ತರಕಾರಿ  ಸಲಾಡ್‌ ಸೇವಿಸುತ್ತಾರೆ. ಇವರು ಕಡ್ಡಾಯವಾಗಿ ಒಂದೇ ರೀತಿಯ ಡಯೆಟ್‌ ಅನುಸರಿಸಲ್ಲ. ತನಗೆ ಯಾವುದು ಅನುಕೂಲವೋ, ಆರೋಗ್ಯಕರ ಜೀವನಶೈಲಿಗಾಗಿ ಅದನ್ನು ಅನುಕರಣೆ ಮಾಡುತ್ತಾರೆ. ಮಾಂಸಾಹಾರವನ್ನು ಹೆಚ್ಚು ಇಷ್ಟಪಡುವ ಇವರಿಗೆ ಬಟರ್‌ ಚಿಕನ್‌ ಅಂದ್ರೆ ತುಂಬ ಇಷ್ಟ. ದೇಹದಲ್ಲಿ ಹೆಚ್ಚಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಇವರು ದಿನದಲ್ಲಿ ಎರಡು ಬಾರಿ ಗ್ರೀನ್‌ ಟೀ ಕುಡಿಯುತ್ತಾರೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT