‘ದಂಗಲ್’ ಸಿನಿಮಾ ಮೂಲಕ ಸಿನಿಪ್ರೇಮಿಗಳ ಹೃದಯದಲ್ಲಿ ಜಾಗ ಮಾಡಿಕೊಂಡಿರುವ ನಟಿ ಸನ್ಯಾ ಮಲ್ಹೋತ್ರಾ ಇದೀಗ ಆಯುಷ್ಮಾನ್ ಖುರಾನಾ ಜೊತೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.

‘ಬದಾಯಿ ಹೊ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರು ಇತ್ತೀಚೆಗಷ್ಟೇ ರಿತೇಶ್ ಬಾತ್ರಾ ಅವರ ‘ಫೋಟೊಗ್ರಾಫರ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

‘ನಟಿ ಎನ್ನುವ ಶಬ್ದ ನನ್ನಲ್ಲಿ ಯಾವತ್ತಿಗೂ ಖುಷಿಯನ್ನುಂಟು ಮಾಡುತ್ತದೆ. ಯಾವಾಗಲೇ ಆಗಲಿ ಆಸಕ್ತಿದಾಯಕ ಅವಕಾಶಗಳು ಸಿಕ್ಕರೆ ನಾನು ಬಿಡುವುದಿಲ್ಲ. ಆ ಚಿತ್ರದ ಪಾತ್ರವಾಗುವುದು ನನ್ನ ಕ್ರಿಯಾಶೀಲ ಮನಸಿಗೆ ಖುಷಿ ನೀಡುತ್ತದೆ. ಹೊಸತನದ ಪಾತ್ರಕ್ಕೆ ಸದ್ಯದಲ್ಲಿಯೇ ತೆರೆದುಕೊಳ್ಳಲಿದ್ದೇನೆ’ ಎಂದು ‘ಬದಾಯಿ ಹೊ’ ಚಿತ್ರದಲ್ಲಿ ನಟಿಸುವುದರ ಸುಳಿವು ನೀಡಿದ್ದಾರೆ ಸನ್ಯಾ.

ಇದೇ ಮೊದಲ ಬಾರಿಗೆ ಆಯುಷ್ಮಾನ್‌ಗೆ ಜೋಡಿಯಾಗಿ ನಟಿಸುತ್ತಿದ್ದು, ಸಿನಿಪ್ರಿಯರಿಗೆ ಹೊಸ ಜೋಡಿ ಇಷ್ಟವಾಗಲಿದೆ ಎಂದು ಬಾಲಿವುಡ್ ಗಲ್ಲಿಯ ಲೆಕ್ಕಾಚಾರ. ಅಂದಹಾಗೆ ‘ದೇವರ ದಯೆಯಿಂದ ಈ ಚಿತ್ರದಲ್ಲಿ ನಾನು ಕುಸ್ತಿ ಮಾಡುತ್ತಿಲ್ಲ’ ಎಂದೂ ಅವರು ಹೇಳಿಕೊಂಡಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.