ಸೋಮವಾರ, ಮಾರ್ಚ್ 1, 2021
25 °C

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ,.  

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆ ಸೋಮವಾರ ನಡೆದಿದ್ದು, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಈ  ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ನೇತೃತ್ವ ವಹಿಸಿರುವ ಮುಲ್ಲಪ್ಪಳ್ಳಿ ರಾಮಚಂದ್ರನ್ ಸುದ್ದಿಗೋಷ್ಠಿ  ಕರೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಆಧ್ಯಕ್ಷರಾಗಿ ರಾಹುಲ್‌ ಇದೇ 16ರಂದು (ಶನಿವಾರ) ಅಧಿಕಾರ ಸ್ವೀಕರಿಸಲಿದ್ದಾರೆ. ಅದೇ ದಿನ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ರಾಹುಲ್‌ಗೆ ಪ್ರಮಾಣಪತ್ರ ನೀಡಲಾಗುವುದು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುತ್ತಿರುವ ನೆಹರೂ–ಗಾಂಧಿ ಕುಟುಂಬದ ಆರನೇ ವ್ಯಕ್ತಿಯಾಗಿದ್ದಾರೆ  ರಾಹುಲ್ ಗಾಂಧಿ. ಈ ಕುಟುಂಬದ ಐದು ತಲೆಮಾರಿನ ವ್ಯಕ್ತಿಗಳು ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಮೋತಿಲಾಲ್‌ ನೆಹರೂ, ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದರೆ ಈಗ ರಾಹುಲ್‌ ಗಾಂಧಿ ಈ ಹುದ್ದೆಯನ್ನೇರಿದ್ದಾರೆ.

ರಾಹುಲ್‍ಗೆ ಜವಾಬ್ದಾರಿ ಬಗ್ಗೆ ಅರಿವು ಇದೆ: ಆಜಾದ್
ರಾಹುಲ್ ಅವರಿಂದ ದೇಶದ ಜನರಿಗೆ ತುಂಬಾ ನಿರೀಕ್ಷೆ ಇದೆ. ರಾಹುಲ್‍ಗೆ ಅವರ ಜವಾಬ್ದಾರಿ ಬಗ್ಗೆ ಅರಿವು ಇದೆ. ಪ್ರಧಾನಿ ಸೇರಿದಂತೆ 89 ಸಚಿವರು ಒಂದು ತಿಂಗಳಿನಿಂದ ಗುಜರಾತಿನಲ್ಲಿ ಕುಳಿತುಕೊಂಡಿದ್ದರೂ ರಾಹುಲ್‍ನ್ನು ಎದುರಿಸಲು ಸಾಧ್ಯವಾಗಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.