ಹೊನ್ನಾವರದಿಂದ ಕಾಣೆಯಾಗಿದ್ದ ಲಾರಿ ಚಾಲಕ ಅಬ್ದುಲ್ ಪತ್ತೆ

ಕಾರವಾರ: ಹೊನ್ನಾವರದ ಹಡಿನಬಾಳದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅಬ್ದುಲ್ ಗಫೂರ್ ಪತ್ತೆಯಾಗಿದ್ದಾರೆ.
ಹೊನ್ನಾವರಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕ, ಶಿರಸಿಯ ಬಿಳಿಗಿರಿಕೊಪ್ಪದ ಅಬ್ದುಲ್ ಗಫೂರ್ ಅಬ್ದುಲ್ ಜಬ್ಬಾರ್ ಸುಂಠಿ ನಾಪತ್ತೆಯಾಗಿದ್ದರು. ಹೊನ್ನಾವರದಲ್ಲಿ ನಡೆಯುತ್ತಿದ್ದ ಅಹಿತಕರ ಘಟನೆಗಳಿಂದ ಗಫೂರ್ ಬದುಕಿರುವ ಕುರಿತು ಅತನ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇಂದು ಗಫೂರ್ ಪತ್ತೆಯಾಗಿದ್ದಾರೆ.
ಗಫೂರ್ ಕಾಲಿಗೆ ಗಾಯಗಳಾಗಿದ್ದು, ಸದ್ಯ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಮಾಹಿತಿ ಪಡೆಯಲಾಗುವುದು ಎಂದು ಹೊನ್ನಾವರ ಠಾಣಾ ಪಿಎಸ್‌ಐ ಆನಂದ್ ಮೂರ್ತಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.