ಗುರುವಾರ , ಮಾರ್ಚ್ 4, 2021
29 °C

ಬೋಧನಾ ವೃತ್ತಿ ತ್ಯಜಿಸಲು ಒಪ್ಪದ ಪತ್ನಿಯನ್ನು ಕೊಂದ ಪತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬೋಧನಾ ವೃತ್ತಿ ತ್ಯಜಿಸಲು ಒಪ್ಪದ ಪತ್ನಿಯನ್ನು ಕೊಂದ ಪತಿ

ಪೂರ್ಣಿಯಾ/ಬಿಹಾರ: ಬೋಧನಾ ವೃತ್ತಿಯನ್ನು ತ್ಯಜಿಸಲು ಒಪ್ಪದ ಪತ್ನಿಯನ್ನು ಪತಿ ಬರ್ಬರವಾಗಿ ಕೊಂದ ಘಟನೆ ಇಲ್ಲಿನ ಬೈಸಿ ವೃತ್ತದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಪತ್ನಿ ತಬಸುಮ್ ಅರಾ (26) ಅವರು ಪೂರ್ಣಿಯಾಸ ಜನತಾ ಗ್ರಾಮದಲ್ಲಿದ್ದ  ಸರ್ಕಾರ ಅನುದಾನಿತ ತಲಿಮಿ ಮರ್ಕಜ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪಣಿಸರಾ ಗ್ರಾಮದ ಮೊಹಮ್ಮದ್ ಅಸ್ಲಾಮ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು.

ತಬಸುಮ್ ಕತೀಹಾರ್‌ನಲ್ಲಿದ್ದ ಬಿ.ಎ ಪರೀಕ್ಷೆಯನ್ನು ಮುಗಿಸಿ ಸಹೋದರ ರಾಜಾ ಅವರ ಜತೆ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಬೈಸಿ ವೃತ್ತದಲ್ಲಿ ಬೈಕ್‌ನ್ನು ತಡೆದ ಅಸ್ಲಾಮ್ ಪತ್ನಿ ತಬಸುಮ್‌ಗೆ ಕತ್ತಿಯಿಂದ ತಿವಿದು ಹತ್ಯೆಗೈದಿದ್ದಾರೆ.

ತಕ್ಷಣವೇ ಪೂರ್ಣಿಯಾದ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ನಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಸಹೋದರ ರಾಜಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.